ಜೀಯೋದಿಂದ ಹೊಸ ಆಫರ್: ಕೇವಲ 86ರೂ.ಗೆ 28ದಿನಗಳ ವ್ಯಾಲಿಡಿಟಿ, ಉಚಿತ ಡೇಟಾ



ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಈಗಾಗಲೇ ಬೆಲೆ ಏರಿಕೆ ಮಾಡಿ ಕೈಸುಟ್ಟುಕೊಂಡಿರುವ ಖಾಸಗಿ ಟೆಲಿಕಾಂ ಕಂಪೆನಿಗಳು ಇದೀಗ  ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಡಾಟಾ ಆಫರ್ ನೀಡುತ್ತಿದೆ. ಪೈಪೋಟಿಗೆ ಬಿದ್ದಿರುವ ಖಾಸಗಿ ಕಂಪೆನಿಗಳು ಬಗೆಬಗೆಯ ಆಫರ್‌ಗಳನ್ನು ನೀಡುತ್ತಿದೆ. ಇದೀಗ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯ ರೀಚಾರ್ಜ್ ಆಫರ್ ನೀಡುತ್ತಿದೆ. ಇದು ಕೇವಲ 86 ರೂ. ಮಾತ್ರ. 


ಹೌದು, ಜಿಯೋ 86 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಒಂದು ತಿಂಗಳ ವ್ಯಾಲಿಟಿಡಿ ಇರುತ್ತದೆ‌‌. ಆದ್ದರಿಂದ 28 ದಿನಗಳ ಕಾಲ ಯಾವುದೇ ತಲೆನೋವು ಇರುವುದಿಲ್ಲ. 28ದಿನ ವ್ಯಾಲಿಟಿಡಿಯೊಂದಿಗೆ ಜಿಯೋ ಒಟ್ಟು 14ಜಿಬಿ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಈ ಮೂಲಕ ಗ್ರಾಹಕರು ವ್ಯಾಲಿಟಿಡಿ ಹಾಗೂ ಡೇಟಾ ಆನಂದಿಸಬಹುದು.


14 ಜಿಬಿ ಪೈಕಿ ಪ್ರತಿದಿನದ ಡಾಟಾ ಮಿತಿ 0.5 ಜಿಬಿ ಮಾತ್ರ. ಬಳಿಕ ಇಂಟರ್ನೆಟ್ ಡೇಟಾ ಸ್ಪೀಡ್ ಇಳಿಕೆಯಾಗಲಿದೆ. ಆದರೆ ಈ ಪ್ಲಾನ್‌ನಲ್ಲಿ ಯಾವುದೇ ವಾಯ್ಸ್‌ಕರೆ ಉಚಿತವಿಲ್ಲ. ಜೊತೆಗೆ ಎಸ್ಎಂಎಸ್ ಕೂಡಾ ಉಚಿತವಿರುವುದಿಲ್ಲ. ವ್ಯಾಲಿಟಿಡಿ ಹಾಗೂ ಡೇಟಾ ಬೇಕಿದ್ದವರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಕಾರಣ ಕೇವಲ 86 ರೂ.ಗೆ ಈ ಸೌಲಭ್ಯವನ್ನು ಆನಂದಿಸಬಹುದು.


ಇದರೊಂದಿಗೆ ರಿಲಯನ್ಸ್ ಜಿಯೋ ಅನ್‌ಲಿಮಿಟೆಡ್ ಡೇಟಾ ಆಫರ್ ಕೂಡ ಇದೆ. ಕೇವಲ ನಿಮ್ಮ ಇರುವ ಪ್ಲಾನ್ ಮೇಲೆ 49 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಒಂದು ದಿನ ಅನ್‌ಲಿಮಿಟೆಡ್ ಡೇಟಾ ಆನಂದಿಸಬಹುದು. ಇನ್ನು ಇದೇ ರೀತಿ ಇರುವ ಪ್ಲಾನ್ ಮೇಲೆ 11 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 1 ಗಂಟೆ ಅನ್‌ಲಿಮಿಟೆಡ್ ಡೇಟಾ ಆಫರ್ ನೀಡುತ್ತಿದೆ.


ರಿಲಯನ್ಸ್ ಜಿಯೋ ಟ್ರು 5 ಜಿ ಪ್ಲಾನ್ ಕೂಡ ಭಾರಿ ಜನಪ್ರಿಯವಾಗಿದೆ. ಕೇವಲ 198 ರೂ.ನಿಂದ ಪ್ಲಾನ್ ಆರಂಭಗೊಳ್ಳುತ್ತಿದೆ. 198 ರೂಪಾಯಿ ಪ್ಲಾನ್‌ನಲ್ಲಿ ಪ್ರತಿ ದಿನ 2 ಜಿಬಿ ಟ್ರು5 ಜಿ ಡೇಟಾ ಉಚಿತವಾಗಿ ಸಿಗಲಿದೆ. ಇದರ ವ್ಯಾಲಿಟಿಡಿ 14 ದಿನ ಇರಲಿದೆ. ಕಡಿಮೆ ಮೊತ್ತದ ಪ್ಲಾನ್ ನೀಡುವ ಮೂಲಕ ಜಿಯೋ ಇದೀಗ ಗ್ರಾಹಕರನ್ನು ಇತರ ನೆಟ್‌ವರ್ಕ್‌ಗೆ ಪೋರ್ಟ್ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಬೇರೆ ನೆಟ್‌ವರ್ಕ್ ಗ್ರಾಹಕರನ್ನು ಸೆಳೆಯುವ ಪ್ಲಾನ್ ಕೂಡ ಅಡಗಿದೆ.


BREAKING NEWS
Loading latest news...
Join our WhatsApp Channel Powered By : Online Pudu