-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡುವ ಸ್ಥಿತಿಯಾಗಿದೆ: ಭಾರತದಿಂದ ದುಬೈಗೆ ಪರಾರಿಯಾದ ರಾಖಿ ಸಾವಂತ್

ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡುವ ಸ್ಥಿತಿಯಾಗಿದೆ: ಭಾರತದಿಂದ ದುಬೈಗೆ ಪರಾರಿಯಾದ ರಾಖಿ ಸಾವಂತ್


ಬಂಧನದ ಭೀತಿ ಎದುರಿಸುತ್ತಿರುವ ಬಾಲಿವುಡ್ ನಟಿ ರಾಖಿ ಸಾವಂತ್​ ಸದ್ಯ ದುಬೈಗೆ ಹಾರಿದ್ದಾರೆ. ಅಲ್ಲಿ ತನ್ನ ಸ್ಥಿತಿ ಭಿಕ್ಷುಕಿಯಂತೆ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. ನಟಿ ಹೇಳಿದ್ದೇನು? 
 
ಬಂಧನ ಭೀತಿಯಿಂದ ಬಾಲಿವುಡ್​ ನಟಿ, ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಭಾರತದಿಂದ ಪರಾರಿಯಾಗಿದ್ದು, ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಕಾಣಿಸಿಕೊಂಡರೆ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಓಡಿಹೋಗಿದ್ದಾರೆ. ಹೈಕೋರ್ಟ್​ ಆದೇಶದನ್ವಯ ಅವರು ನ್ಯಾಯಾಲಯದ ಮುಂದೆ ಶರಣಾಗಬೇಕಿದೆ. ರಾಕಿ ಬಂಧನದ ಭೀತಿ  ಎದುರಿಸುತ್ತಿದ್ದು, ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.  

ರಾಕಿ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಂದಿದೆ. ಆದಿಲ್ ಅವರ ಖಾಸಗಿ ವಿಡಿಯೋವನ್ನು ರಾಖಿ ವೈರಲ್ ಮಾಡಿದ್ದರು. ಈ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ರಾಖಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಯಾವ ಕ್ಷಣದಲ್ಲಾದರೂ ರಾಖಿ ಬಂಧನಕ್ಕೆ ಒಳಗಾಗುತ್ತಾರೆಯೇ ಎಂಬ ಚರ್ಚೆಗಳು ಎದ್ದಿವೆ. ರಾಖಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

ಇದೀಗ ಮೀಡಿಯಾ ಮುಂದೆ ಬಂದು ಕಣ್ಣೀರು ಹಾಕಿರುವ ರಾಖಿ ಸಾವಂತ್​ ಅವರು ಶಾರುಖ್​ ಖಾನ್​, ಸಲ್ಮಾನ್​ ಖಾನ್ ಸೇರಿದಂತೆ ಸ್ಟಾರ್​ ನಟರು ಒಂದು ಕ್ಷಣದಲ್ಲಿ ನನಗೆ ಬೇಲ್​ ಕೊಡಿಸುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಆದರೆ ನಾನು ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡುವ ಸ್ಥಿತಿ ಉಂಟಾಗಿದೆ. ನಾನು ಯಾರ ಸಹಾಯವೂ ಕೇಳುವುದಿಲ್ಲ. ಭಿಕ್ಷೆ ಬೇಡುವ ರೀತಿಯಲ್ಲಿ ಯಾರ ನೆರವನ್ನೂ ಪಡೆಯುವುದು ಇಷ್ಟವಿಲ್ಲ.  ಭಾರತದ ಕೋರ್ಟ್​  ಮೇಲೆ ನನಗೆ ನಂಬಿಕೆ ಇದೆ. ಏಕೆಂದರೆ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನನಗೆ ಶಿಕ್ಷೆ ಆಗುವುದಿಲ್ಲ. ಆದರೆ ಸದ್ಯದ ಸ್ಥಿತಿಯಲ್ಲಿ ಕೋರ್ಟ್​  ಆದೇಶದಿಂದಾಗಿ ಅಲೆಯುವಂತಾಗಿದೆ, ಅಕ್ಷರಶಃ ನನ್ನ ಪಾಡು ಭಿಕ್ಷುಕಿಯಂತೆ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. 

ಅಷ್ಟಕ್ಕೂ, ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿ ವಿಚಾರ ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದಾದ ಮೇಲೊಂದರಂತೆ ನಾಟಕೀಯ ಬೆಳವಣಿಗೆಗಳು ಈ ಜೋಡಿಯ ನಡುವೆ ನಡೆಯುತ್ತಲೇ ಇದೆ.  ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರುವ ನಟಿ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ದುರ್ರಾನಿ ಅವರ  ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. 

ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ ಇಸ್ಲಾಂಗೆ ಮತಾಂತರವಾಗಿದ್ದೇನೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಅವರು ಜೈಲಿಗೆ ಹೋದದ್ದು, ಬಳಿಕ ಬಿಡುಗಡೆಗೊಂಡು ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಸಾವಂತ್ ಇದ್ದಕ್ಕಿದ್ದಂತೆಯೇ ಕಣ್ಮರೆಯಾದರು. ಮರಾಠಿ ಬಿಗ್​ಬಾಸ್​ ಮನೆಯಲ್ಲಿಯೂ ಕಾಣಿಸಿಕೊಂಡರು. ಈ ಹಿಂದೆ ಕೂಡ ದುಬೈನಿಂದಲೇ ಸಂದರ್ಶನ ನೀಡಿದ್ದ ನಟಿ, ನಾನು ಏನೂ ತಪ್ಪು ಮಾಡಲಿಲ್ಲ. ಮಾಡದ ತಪ್ಪಿಗೆ ಹೈಕೋರ್ಟ್​ ಸರೆಂಡರ್​ ಆಗುವಂತೆ ಹೇಳುತ್ತಿದೆ. ನಾನು ನಿರಪರಾಧಿ ಎಂದು ತಿಳಿಸುವ ಎಲ್ಲಾ ಸಾಕ್ಷ್ಯಾಧಾರಗಳೂ ನನ್ನ ಬಳಿ ಇವೆ. ಆದರೂ ಯಾಕೋ ನನ್ನನ್ನು ಸಿಲುಕಿಸುತ್ತಿದ್ದಾರೆ. ನಾನು ಮರಾಠಿ ಬಿಗ್​ಬಾಸ್​ಗೆ ಕದ್ದುಮುಚ್ಚಿ ಹೋಗಿ ಶೂಟಿಂಗ್​ ಮಾಡಿ ಮತ್ತೆ ವಾಪಸ್​ ಬರ್ತೇನೆ. ನನ್ನನ್ನು ವಿನಾಕಾರಣ ನೋಯಿಸಲಾಗುತ್ತಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದಿದ್ದರು. 
 


Ads on article

Advertise in articles 1

advertising articles 2

Advertise under the article

ಸುರ