-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಮಳೆಯಲ್ಲಿ ಮೈಚಳಿ ಬಿಟ್ಟು ನಟನೊಂದಿಗೆ ರೊಮಾನ್ಸ್ ಮಾಡಿದ ನಿವೇದಿತಾ ಗೌಡ: ವೀಡಿಯೋ ಶೇರ್ ಮಾಡಿದ ನಟಿ

ಮಂಗಳೂರು: ಮಳೆಯಲ್ಲಿ ಮೈಚಳಿ ಬಿಟ್ಟು ನಟನೊಂದಿಗೆ ರೊಮಾನ್ಸ್ ಮಾಡಿದ ನಿವೇದಿತಾ ಗೌಡ: ವೀಡಿಯೋ ಶೇರ್ ಮಾಡಿದ ನಟಿ


ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳುಗಳಿಂದ ಸ್ನೇಹಿತೆಯೊಬ್ಬರೊಂದಿಗೆ ರೀಲ್ಸ್​ ಮಾಡುತ್ತಿದ್ದಾರೆ. ಗಾಯಕ ಚಂದನ್​ ಶೆಟ್ಟಿಯಿಂದ ವಿಚ್ಛೇದನ​ ಪಡೆದ ಬಳಿಕ ಸ್ನೇಹಿತೆಯೊಂದಿಗೆ ರೀಲ್ಸ್​ ಹೆಚ್ಚಾಗಿದೆ. ಬಳಕುವ ಬಳ್ಳಿಯಂತಿರುವ ನಿವೇದಿತಾ ಗೌಡ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​‌ಗಳನ್ನು ಮಾಡು ನಿವೇದಿತಾ ಗೌಡರ ತೇಜೋವಧೆ ಮಾಡಲಾಗುತ್ತಿದೆ. 

ವಿಚ್ಛೇದನ ಬಳಿಕ ನಿವೇದಿತಾ ಗೌಡರನ್ನು ನೆಟ್ಟಿಗರು ಸದಾ ಟ್ರೋಲ್​ ಮಾಡುತ್ತಲೇ ಇರುತ್ತಾರೆ. ಆದರೆ ಇದ್ಯಾವುದಕ್ಕೂ ನಿವೇದಿತಾ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾರು ಏನೇ ಹೇಳಿದರೂ ನಿವೇದಿತಾ ಮಾತ್ರ ಈಗ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ನಿವೇದಿತಾ ಗೌಡ ಹಾಗೂ ಅವರ ಮಾಜಿ ಪತಿ ನಟ-ಗಾಯಕ ಚಂದನ್ ಶೆಟ್ಟಿ ನಟನೆಯ 'ಮುದ್ದು ರಾಕ್ಷಸಿ' ಚಿತ್ರ ಕೂಡ ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಇನ್ನೊಂದೆಡೆ ಇದಾಗಲೇ ಅವರ ಮನಸಾರೆ ನಿನ್ನ (ಕನ್ನಡ) ಮತ್ತು ವಾಲು ಕಳ್ಳತಾ (ತೆಲುಗು) ಆಲ್ಬಂ ಸಾಂಗ್​ ರಿಲೀಸ್​ ಆಗಿವೆ. ಇಂದು ಇನ್ನೊಂದು ಹಾಡು ರಿಲೀಸ್​ ಆಗಿದ್ದು, ಅದನ್ನು ಶೇರ್​ ಮಾಡಿಕೊಂಡಿದ್ದಾರೆ ನಟಿ. 

ಇನ್ನೂ ತೆಲುಗಿನಲ್ಲಿ ನಟನಾಗಿ, ಬರಹಗಾರನಾಗಿ, ಸಂಕಲನಕಾರನಾಗಿ ಇಷ್ಟೇ ಅಲ್ಲದೇ ಛಾಯಾಗ್ರಾಹಕರಾಗಿ ಕೂಡ ಗುರುತಿಸಿಕೊಂಡಿರುವ ಗೌರಿ ನಾಯ್ಡು ಇಲ್ಲಿ ನಿವೇದಿತಾ ಗೌಡರೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಮಳೆಯಲ್ಲಿ ಇಬ್ಬರೂ ಮೈಚಳಿ ಬಿಟ್ಟು ರೊಮಾನ್ಸ್​ ಮಾಡಿರುವ ಹಾಡು ರಿಲೀಸ್​ ಆಗಿದೆ. ಇಂದು ಹಾಡು ರಿಲೀಸ್​ ಆಗಿರುವುದಾಗಿ ನಟಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. 

ಇನ್ನು ನಿವೇದಿತಾ ರೀಲ್ಸ್​ ಹಾಕಿದಾಗಲೆಲ್ಲಾ ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು. ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದಕ್ಕೆ ಉತ್ತರವಾಗಿ ಮಾಜಿ ಪತಿಯ ಜೊತೆಯೇ  ಮುದ್ದು ರಾಕ್ಷಸಿ ಚಿತ್ರ ಮಾಡಿದ್ದಾರೆ.  ಈ ಚಿತ್ರವನ್ನು ಪುನೀತ್ ಶ್ರೀನಿವಾಸ್ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ.ಮೋಹನ್ ಕುಮಾರ್ ಈ ಮುದ್ದು ರಾಕ್ಷಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಂ.ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಈ ವರ್ಷಾಂತ್ಯದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

Ads on article

Advertise in articles 1

advertising articles 2

Advertise under the article