ಕೇರಳದ ಯುವಕ, ಅಸ್ಸಾಂ ಯುವತಿ ನಡುವಿನ ಪ್ರೀತಿ ಬೆಂಗಳೂರಿನಲ್ಲಿ ದುರಂತದೊಂದಿಗೆ ಅಂತ್ಯ- ಪ್ರೇಯಸಿ ಹತ್ಯೆ ಮಾಡಿ ಪ್ರಿಯಕರ ಪರಾರಿ


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಬಂದು ನೆಲೆಸಿದ್ದ ಕೇರಳ ಮೂಲದ ಯುವಕ ಹಾಗೂ ಅಸ್ಸಾಂ ಮೂಲದ ಯುವತಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಇಬ್ಬರೂ ಜೊತೆಯಾಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಯುವಕನೇ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ ಪರಾರಿ ಆಗಿರುವ ಮೂಲಕ ಇವರ ಪ್ರೀತಿ ಅಂತ್ಯಗೊಂಡಿದೆ.


ಬೆಂಗಳೂರಿನ ಇಂದಿರಾನಗರ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್‌ನಲ್ಲಿ ಈ ಕೊಲೆ ನಡೆದಿದೆ. ಘಟನೆ ಕಳೆದ 3 ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ಯುವತಿ ಮಾಯಾ ಗೊಗಾಯ್(19) ಅಸ್ಸಾಂ ರಾಜ್ಯದವಳು. ಇನ್ನು ಕೊಲೆ ಮಾಡಿದ ಆರೋಪಿ ಆರವ್ ಅನಾಯ್(21) ಕೇರಳ ರಾಜ್ಯದವನು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ಇಬ್ಬರೂ ಪರಿಚಯವಾಗಿ ಸ್ನೇಹವೂ ಬೆಳೆದಿದೆ. ಇಬ್ಬರ ನಡುವೆ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಅಂಕುರಿಸಿದೆ.


ಕಳೆದ ನಾಲ್ಕೈದು ದಿನಗಳ ಹಿಂದೆ ಇಂದಿರಾನಗರದ ದಿ ರಾಯಲ್ ಲಿವಿಂಗ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಇಬ್ಬರೂ ಜೊತೆಯಾಗಿ ನೆಲೆಸಿದ್ದರು. ಆದರೆ, ಕಳೆದ ಮೂರು ದಿನಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಆಗ ಇಬ್ಬರ ನಡುವೆ ಜಗಳದ ನಡೆದು ಪ್ರೇಮಿ ಆರವ್ ತನ್ನ ಪ್ರೇಯಸಿ ಮಾಯಾಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ನಡೆದು 3ದಿನಗಳ ಬಳಿಕ ಮನೆಯೊಳಗಿನಿಂದ ದುರ್ವಾಸನೆ ಬಂದ ಬಳಿಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.


ನ.23ರಂದು ಮಧ್ಯಾಹ್ನ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಮಾಯಾ ಗೊಗೋಯ್ ಹಾಗೂ ಆರವ್ ಅನಾಯ್ ಇಬ್ಬರು ಜೊತೆಯಾಗಿ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅ.24ರಂದೇ ಮಾಯಾ ಕೊಲೆ ಮಾಡಿರುವ ಶಂಕೆಯಿದೆ. ಕೊಲೆಯಾದ ಬಳಿಕ ಅದೇ ರೂಮ್‌ನಲ್ಲಿಯೇ ಉಳಿದುಕೊಂಡಿದ್ದ ಆಸಾಮಿ, ಅಲ್ಲಿಯೇ ಕುಳಿತು ಸಿಗರೇಟ್ ಸೇದಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದಾನೆ. ನಿನ್ನೆ ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ತೆರಳಿದ್ದಾನೆ. ಮೃತದೇಹ ಪೀಸ್ ಮಾಡುವ ಪ್ಲಾನ್ ಇತ್ತಾ ಆರೋಪಿಗೆ? ಕೊನೆ ಪ್ಲಾನ್ ಫೇಲ್ ಆಗಿ ಮೃತದೇಹ ಬಿಟ್ಟು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu