-->

ಚಂದಾದಾರಿಕೆಯ ಅಗತ್ಯವೇ ಇಲ್ಲದೆ ನೆಟ್‌‌ಫ್ಲಿಕ್ಸ್‌ನಲ್ಲಿ ಉಚಿತವಾಗಿ ನೋಡಬಹುದು ಮೂವೀ ಸೀರೀಸ್

ಚಂದಾದಾರಿಕೆಯ ಅಗತ್ಯವೇ ಇಲ್ಲದೆ ನೆಟ್‌‌ಫ್ಲಿಕ್ಸ್‌ನಲ್ಲಿ ಉಚಿತವಾಗಿ ನೋಡಬಹುದು ಮೂವೀ ಸೀರೀಸ್


ಸದ್ಯ ಜನತೆ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವುದು ಕಡಿಮೆ ಮಾಡಿದ್ದಾರೆ. ಹೊಸ ಸಿನಿಮಾಗಳು ರಿಲೀಸ್ ಆದ ಕೆಲವೇ ದಿನಗಳಲ್ಲಿ ಒಟಿಟಿಗಳಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ನಿರ್ಮಾಪಕರಿಗೆ ಹೂಡಿಕೆ ವಾಪಸ್ಸಾಗುತ್ತದೆ. ಒಟಿಟಿಗಳಲ್ಲಿ ಬೇಗ ಬಿಡುಗಡೆ ಮಾಡುವುದು ಉತ್ತಮ ಎಂದು ನಿರ್ಮಾಪಕರು ಮತ್ತು ಒಟಿಟಿ ನಿರ್ವಾಹಕರು ಭಾವಿಸುತ್ತಾರೆ.  

ನೆಟ್‌ಫ್ಲಿಕ್ಸ್ ಹೊಸ ಆಫರ್ ನೀಡುತ್ತಿದೆ. ಟ್ರೈಲರ್‌ನೊಂದಿಗೆ ವೆಬ್ ಸರಣಿಯ ಮೊದಲ ಭಾಗವನ್ನು ಉಚಿತವಾಗಿ ವೀಕ್ಷಿಸಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ಆಯ್ದ ಸಿನಿಮಾಗಳು ಮತ್ತು ಟಿವಿ ಸರಣಿಗಳನ್ನು ಈಗ ಉಚಿತವಾಗಿ ವೀಕ್ಷಿಸಬಹುದು. ಯಾವುದೇ ಡೆಸ್ಕ್‌ಟಾಪ್ ಅಥವಾ ಆಂಡ್ರಾಯ್ಡ್ ಬ್ರೌಸರ್ ಬಳಸಿ ಇದನ್ನು ವೀಕ್ಷಿಸಬಹುದು.

ಪ್ರಸ್ತುತ, ಐಒಎಸ್ ಬ್ರೌಸರ್‌ಗಳು ಈ ಸೌಲಭ್ಯವನ್ನು ಬೆಂಬಲಿಸುವುದಿಲ್ಲ. ಇದು ವೆಬ್-ಮಾತ್ರ ಆಪ್ಶನ್‌ ಆಗಿದೆ. ಹೊಸ ಬಳಕೆದಾರರನ್ನು ಆಕರ್ಷಿಸಲು ಇದು ಮಾರ್ಕೆಟಿಂಗ್ ತಂತ್ರ. ನೀವು ನೆಟ್‌ಫ್ಲಿಕ್ಸ್‌ಗೆ ಭೇಟಿ ನೀಡಿ ಅವರ್ ಪ್ಲಾನೆಟ್, ಸ್ಟ್ರೇಂಜರ್ ಥಿಂಗ್ಸ್, ಬರ್ಡ್ ಬಾಕ್ಸ್ ಮುಂತಾದವುಗಳನ್ನು ಉಚಿತವಾಗಿ ವೀಕ್ಷಿಸಬಹುದು. ಟಿವಿ ಕಾರ್ಯಕ್ರಮಗಳ ಮೊದಲ ಸಂಚಿಕೆಯನ್ನು ಉಚಿತವಾಗಿ ವೀಕ್ಷಿಸಬಹುದು. 

Apple TV+ ನಲ್ಲೂ ಇದೇ ರೀತಿಯ ವೈಶಿಷ್ಟ್ಯವಿದೆ. netflix.com/watch-free ಗೆ ಭೇಟಿ ನೀಡುವ ಮೂಲಕ ಉಚಿತವಾಗಿ ವೀಕ್ಷಿಸಬಹುದಾದ ಎಲ್ಲಾ ಸರಣಿಗಳು ಮತ್ತು ಚಲನಚಿತ್ರಗಳ ಪಟ್ಟಿಯನ್ನು ನೋಡಬಹುದು. ನೆಟ್‌ಫ್ಲಿಕ್ಸ್‌ಗೆ ಚಂದಾದಾರರಾಗಲು ತಿಂಗಳಿಗೆ ರೂ.349 ವೆಚ್ಚವಾಗುತ್ತದೆ.




Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article