-->

ನೀಲಿ‌ಕಂಗಳ ಗೊಂಬೆ ಮೇಲೆ ಈತನಿಗೆ ಲವ್: ಆರನೇ ವರ್ಷದ ಆ್ಯನಿವರ್ಸರಿ ಆಚರಿಸಿ ತನ್ನ ಹುಚ್ಚು ಪ್ರೀತಿಯನ್ನು ಸಂಭ್ರಮಿಸಿದ ಯುವಕ

ನೀಲಿ‌ಕಂಗಳ ಗೊಂಬೆ ಮೇಲೆ ಈತನಿಗೆ ಲವ್: ಆರನೇ ವರ್ಷದ ಆ್ಯನಿವರ್ಸರಿ ಆಚರಿಸಿ ತನ್ನ ಹುಚ್ಚು ಪ್ರೀತಿಯನ್ನು ಸಂಭ್ರಮಿಸಿದ ಯುವಕ


ಪ್ರೀತಿ ಅನ್ನೋದು ಅವ್ಯಕ್ತ ಅನುಭವ. ಯಾರಿಗೆ ಬೇಕಾದರೂ ಯಾರ ಮೇಲಾದ್ರೂಪ್ರೀತಿ ಆಗಬಹುದು.  ನಿಜವಾದ ಪ್ರೀತಿಯಾದ್ರೆ, ಅದಕ್ಕೆ ಜಾತಿ, ಮತ, ಧರ್ಮ ಯಾವುದೂ ಅಡ್ಡ ಬರೋದಿಲ್ಲ. ಆದರೆ ಕೆಲವೊಮ್ಮೆ ಪ್ರೀತಿಯ ಹುಚ್ಚು ಅಧಿವಾದಲ್ಲಿ, ನಮ್ಮ ಯೋಚನೆಗೂ ನಿಲುಕಸ ಘಟನೆಗಳು ನಡೆಯುತ್ತವೆ.  ಅಲ್ಲಿ ಮಾನವರು ಎಐ ಚಾಟ್ (AI Chats) ಗಳು ಮತ್ತು ಹೊಲೊಗ್ರಾಮ್ ಗಳಿಂದ ರೋಬೋಟ್‌ಗಳವರೆಗೆ ವಿಚಿತ್ರ ಸ್ಥಳಗಳಲ್ಲಿ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಮದುವೆಯಾಗುವ ಮೂಲಕವೂ, ಅವರು ತಮ್ಮ ಪ್ರೀತಿಯ ಹುಚ್ಚನ್ನು ಬೇರೆ ಲೆವೆಲ್ ಗೆ ಕೊಂಡೊಯ್ಯುತ್ತಾರೆ. 
 
ಈಗ ನಾವು ಹೇಳ್ತಿರೋದು ಅಂತಹದ್ದೇ ಜಪಾನ್ ವ್ಯಕ್ತಿಯೊಬ್ಬನ ಬಗ್ಗೆ. ಅವನ ಹೆಸರು ಅಕಿಹಿಕೊ ಕೊಂಡೋ, 41 ವರ್ಷದ ಅಕಿಹಿಕೊ ಕೊಂಡೋ 6 ವರ್ಷಗಳ ಹಿಂದೆ ನವೆಂಬರ್ 4ರಂದು ಗಾಯಕಿ ಹಟ್ಸುನೆ ಮಿಕು (Hatsuke Miku) ಅವರನ್ನು ವಿವಾಹವಾಗಿದ್ದಾನೆ. ಇತ್ತೀಚೆಗೆ, ಈ ಜೋಡಿ ತಮ್ಮ ವಿವಾಹದ ಆರನೇ ವಾರ್ಷಿಕೋತ್ಸವದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಾನು ಮಿಕುವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮಿಕು ಒಂದು ರೀತಿಯ ಹಾಡುವ ಧ್ವನಿ ಸಂಶ್ಲೇಷಕ ಸಾಫ್ಟ್ವೇರ್ ಆಗಿದೆ. ದೊಡ್ಡ ನೀಲಿ ಪೋನಿಟೈಲ್ ಮತ್ತು ನೀಲಿ ಕಣ್ಣುಗಳನ್ನು ಹೊಂದಿರುವ 16 ವರ್ಷದ ಪಾಪ್ ಗಾಯಕಿಯ ಅನಿಮೇಷನ್ ನಿರ್ಮಿಸಿ ಅದನ್ನೇ ಮದ್ವೆ ಆಗಿದ್ದಾನೆ ಈತ. 
 
ಅನಿಮೆಷನ್ ಪಾತ್ರದ ಮೇಲೆ ಲವ್ ಮತ್ತು ಮದುವೆಯ ಬಗ್ಗೆ ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಆದರೆ ಇದು ಸಂಪೂರ್ಣವಾಗಿ ನಿಜ, ಅಕಿಹಿಕೊ ಕೊಂಡೋ ತನ್ನ ಪ್ರೇಮಕಥೆಯ ಬಗ್ಗೆ ಇನ್ ಸ್ಟಾಗ್ರಾಮ್‌ನಲ್ಲಿ ಪೋಸ್ಟ್ (Instagram post) ಮಾಡುತ್ತಲೇ ಇರುತ್ತಾರೆ. ಬಹಳ ಮಂದಿ ರಿಜೆಕ್ಟ್ ಮಾಡಿದ ಬಳಿಕ ವರ್ಚುವಲ್ ಗಾಯಕಿ ಹಟ್ಸುನೆ ಮಿಕುರವರನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ್ದರು ಅಕಿಹಿಕೋ. ಆಕೆಯನ್ನು ಇಷ್ಟಪಟ್ಟು, ಪ್ರೀತಿ ಮಾಡಿ ಮದುವೆ ಕೂಡ ಆಗಿದ್ದಾರೆ ಅಕಿಹಿಕೊ. 


ಅಕಿಹಿಕೊ ಕೊಂಡೋ  ಜಪಾನಿನ ಮಾಧ್ಯಮಗಳಿಗೆ ತನ್ನ ಕಥೆಯನ್ನು ಹೇಳಿದ್ದು,ಈತ ಈ ಹಿಂದೆ ಏಳು ಮಂದಿಯನ್ನು ಪ್ರೀತಿಸಿದ್ದನಂತೆ, ಆದರೆ ಏಳು ಬಾರಿ ಆತನ ಪ್ರೀತಿಯನ್ನು ರಿಜೆಕ್ಟ್ ಮಾಡಲಾಗಿತ್ತು. ಅನಿಮೇಷನ್ ಗೊಂಬೆ ಮೇಲೆ ಲವ್ ಆಗಿರೋದಕ್ಕೆ ಈತನನ್ನು ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರಂತೆ. ಆದರೆ ಅದೆಲ್ಲವನ್ನೂ ಮೀರಿ, ಇದೀಗ ಅಕಿಹಿಕೊ ತಮ್ಮ 6ನೇ ವರ್ಷದ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ.
 
2017 ರಲ್ಲಿ, ಅಕಿಹಿಕೊ ಕೊಂಡೋ ಅವರ ಜೀವನದಲ್ಲಿ ಅವರು ಎಂದಿಗೂ ಊಹಿಸದ ಒಂದು ಘಟನೆ ನಡೆಯಿತು. ಕ್ರಿಪ್ಟನ್ ಫ್ಯೂಚರ್ ಮೀಡಿಯಾ ರಚಿಸಿದ ಉದ್ದನೆಯ ನೀಲಿ ಬಣ್ಣದ ಕೂದಲಿನ, ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ 16 ವರ್ಷದ ವರ್ಚುವಲ್ ಗಾಯಕಿ ಹಟ್ಸುನೆ ಮಿಕು ಅವರನ್ನು ನೋಡಿದರು. ವರ್ಚುವಲ್ ಸಂಗೀತದ ಜಗತ್ತಿನಲ್ಲಿ ಹೆಸರುವಾಸಿಯಾದ ಮಿಕು ಶೀಘ್ರದಲ್ಲೇ ಕೊಂಡೋಗೆ ಕೇವಲ ಅನಿಮೆಷನ್ ಪಾತ್ರಕ್ಕಿಂತ ಹೆಚ್ಚಾಗಿ ಹೃದಯಕ್ಕೆ ಹತ್ತಿರವಾಗತೊಡಗಿದಳು. ಕೊಂಡೋ ಹೊಲೊಗ್ರಾಮ್ ಸಾಧನದ ಮೂಲಕ ಮಿಕುಗೆ ಪ್ರಪೋಸ್ ಮಾಡಿದನು. ಅದಕ್ಕೆ ಮಿಕು ಕೂಡ ತಕ್ಷಣ ಒಪ್ಪಿಕೊಂಡಿರೋದಾಗಿ ಹೇಳಿದ್ದಾರೆ. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article