-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಚಂದನ್ ಶೆಟ್ಟಿ-ನಿವೇದಿತಾ ಬಳಿಕ ರಾಜಾರಾಣಿ ಶೋ ಖ್ಯಾತಿಯ ಜಯಶ್ರೀ ಆರಾಧ್ಯ-ಸ್ಟೀವನ್ ಬ್ರೇಕ್‌ಅಪ್: ಇದು ಕಾರಣ

ಚಂದನ್ ಶೆಟ್ಟಿ-ನಿವೇದಿತಾ ಬಳಿಕ ರಾಜಾರಾಣಿ ಶೋ ಖ್ಯಾತಿಯ ಜಯಶ್ರೀ ಆರಾಧ್ಯ-ಸ್ಟೀವನ್ ಬ್ರೇಕ್‌ಅಪ್: ಇದು ಕಾರಣ


ಬೆಂಗಳೂರು: ಸೆಲೆಬ್ರಿಟಿಗಳ ನಡುವೆ ಲವ್-ಬ್ರೇಕಪ್, ಮದುವೆ- ಡಿವೋರ್ಸ್ ಎಲ್ಲವೂ ಕಾಮನ್. ಇತ್ತೀಚಿನ ವರ್ಷಗಳಲ್ಲಿ ಧನುಷ್-ಐಶ್ವರ್ಯಾ, ನಾಗ ಚೈತನ್ಯ-ಸಮಂತಾ, ಜಯಂ ರವಿ-ಆರತಿ, ಯುವ ರಾಜ್‌ಕುಮಾರ್-ಶ್ರೀದೇವಿ ಭೈರಪ್ಪ ಹಾಗೂ ಚಂದನ್ ಶೆಟ್ಟಿ-ನಿವೇದಿತಾ ಗೌಡ ತಮ್ಮ ವಿಚ್ಛೇದನ ವಿಚಾರದಿಂದ ಭಾರೀ ಸುದ್ದಿಯಲ್ಲಿದ್ದರು. ಇದೀಗ ಬಿಗ್‌ಬಾಸ್ ಒಟಿಟಿ ಖ್ಯಾತಿಯ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್ ಅವರ ಲವ್ ಬ್ರೇಕಪ್ ಸಖತ್ ಸದ್ದು ಮಾಡುತ್ತಿದ್ದು, ಈ ಬಗ್ಗೆ ನಟಿ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.


ಬಿಗ್‌ಬಾಸ್ ಕನ್ನಡ ಓಟಿಟಿ ಶೋ ಸ್ಪರ್ಧಿ, ಹಿರಿಯ ನಟಿ ದಿ.ಮಾರಿಮುತ್ತು ಅವರ ಮೊಮ್ಮಗಳಾದ ಜಯಶ್ರೀ ಆರಾಧ್ಯ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಇದಲ್ಲದೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುವ ರಾಜಾ-ರಾಣಿ ಶೋನಲ್ಲಿ ತಮ್ಮ ಲಿವ್ಇನ್ ರಿಲೇಶನ್‌ಶಿಪ್ ಸಂಗಾತಿ ಸ್ಟೀವನ್‌ನೊಂದಿಗೆ ಭಾಗವಹಿಸಿ ಸಖತ್ ಸದ್ದು ಮಾಡಿದ್ದ ಜಯಶ್ರೀ ಇದೀಗ ಬ್ರೇಕಪ್ ವಿಚಾರವಾಗಿ ಸೌಂಡ್ ಮಾಡುತ್ತಿದ್ದಾರೆ.


ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡ್ಮೂರು ವರ್ಷಗಳಿಂದ ಲಿವ್ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಇದೀಗ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್ ಕಾರಣಾಂತರಗಳಿಂದ ದೂರಾಗಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿ, ಜೊತೆಗಿದ್ದ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ.

ಮದುವೆಯಾಗದೇ ಇದ್ದರೂ ಈ ಜೋಡಿ ರಾಜಾ-ರಾಣಿ ಶೋನಲ್ಲಿ ಭಾಗವಹಿಸಿದ್ದು, ಭಾರೀ ಚರ್ಚೆಯಾಗಿತ್ತು. ದಂಪತಿ ನಡುವೆ ಮದುವೆಯಾಗದೇ ಇರುವವರನ್ನು ಕರೆಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ತಮ್ಮ ಪ್ರೀತಿ ಬಗ್ಗೆ ಹೇಳಿದ್ದ ಜೋಡಿ ನಾವಿಬ್ಬರೂ ಅಧಿಕೃತವಾಗಿ ಮದುವೆ ಆಗದೆ ಇದ್ರೂ, ತಾಳಿ ಕಟ್ಟಿಲ್ಲ ಅನ್ನೋದನ್ನು ಬಿಟ್ಟರೆ ನಾವಿಬ್ಬರು ಪತಿ -ಪತ್ನಿಯಂತೆ ಇದ್ದೀವಿ, ನಮಗೆ ಮದುವೆ ಆಗಿಲ್ಲ ಎನ್ನುವ ಭಾವನೆ ಬರೋದೆ ಇಲ್ಲ ಎಂದು ಹೇಳಿದ್ದರು. ಜೊತೆಗೆ ತಾವು ಆದಷ್ಟು ಬೇಗ ಮದುವೆ ಆಗೋದಾಗಿ ಕೂಡ ತಿಳಿಸಿದ್ದರು. ಇದೀಗ ಜೋಡಿ ಕಾರಣಾಂತರಗಳಿಂದ ದೂರಾಗಿದ್ದು, ಈ ಬಗ್ಗೆ ಸ್ವತಃ ನಟಿ ಜಯಶ್ರೀ ಆರಾಧ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

ಹೌದು ವದಂತಿಗಳು ನಿಜ ನಾನು ನನ್ನ ಗೆಳೆಯನಿಂದ ಬೇರ್ಪಟ್ಟಿದ್ದೇನೆ ಹಾಗಾಗಿ ಇನ್ನು ಮುಂದೆ ಗ್ಲಾಮ್ ರೂಮ್ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸಕ್ಕೆದಯವಿಟ್ಟು ನನಗೆ ಅಥವಾ ನನ್ನ ತಂಡಕ್ಕೆ ಸಂಪರ್ಕಿಸಿ ಆಗ ಮತ್ತು ಈಗ ನೀವು ನನ್ನ ಮೇಲೆ ತೋರಿರುವ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು ಎಂದು ಜಯಶ್ರೀ ಆರಾಧ್ಯ ಬರೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ