ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ತರಗತಿ ಬಂಕ್ ಮಾಡಿ ಸ್ನೇಹಿತರೊಂದಿಗೆ ತಿರುಗಾಡುತ್ತಿದ್ದ ಪುತ್ರಿಗೆ ಅಪ್ಪ ಕೊಟ್ಟ ಶಿಕ್ಷೆಯೇನು ಗೊತ್ತೇ?


ಅಮೇರಿಕಾ: ಸಹಪಾಠಿಗಳೊಂದಿಗೆ ಸೇರಿ ತರಗತಿಬಂಕ್ ಮಾಡಿ ಮಕ್ಕಳು ಊರು ಸುತ್ತುವುದು ಸಾಮಾನ್ಯ. ಹರೆಯದವರು ಸಾಮಾನ್ಯವಾಗಿ ಪಾಠದಲ್ಲಿ ಆಸಕ್ತಿಯಿರದೆ ವೃಥಾ ಕಾಲಹರಣ ಮಾಡುತ್ತಾ ಪೋಷಕರ ದುಡ್ಡು ಹಾಗೂ ತಮ್ಮ ಅಮೂಲ್ಯ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ಕೆಲವೊಬ್ಬ ಪೋಷಕರು ಮಕ್ಕಳಿಗೆ ನೀಡಿದ್ದ ಹಲವು ಸೌಲಭ್ಯಗಳಿಗೆ ಕಡಿವಾಣ ಹಾಕುತ್ತಾರೆ. ಅವರಿಗೆ ಕೊಟ್ಟ ಸ್ಮಾರ್ಟ್‌ಫೋನ್‌ಗಳನ್ನು ಕಿತ್ತುಕೊಳ್ಳುತ್ತಾರೆ. ಹಣ ನೀಡುವುದನ್ನು ಕಡಿಮೆ ಮಾಡುತ್ತಾರೆ. ಅವರ ಸ್ನೇಹಿತರ ಮೇಲೂ ಒಂದು ಕಣ್ಣಿಡುತ್ತಾರೆ. ಆದರೆ ಅಮೆರಿಕಾದಲ್ಲೊಬ್ಬ ಅಪ್ಪ ಹೀಗೆ ತರಗತಿ ಮಿಸ್ ಮಾಡಿ ಜಾಲಿ ಮಾಡ್ತಿದ್ದ ಮಗಳಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ.

ಮಗಳೊಬ್ಬಳು ಮ್ಯಾಥ್ಸ್ ತರಗತಿಯನ್ನು ಬಂಕ್ ಮಾಡಿ ಸ್ನೇಹಿತರೊಂದಿಗೆ ತಿರುಗಾಡಲು ಹೋಗುತ್ತಿದ್ದಳು. ಇದರಿಂದ ಸಿಟ್ಟಾದ ಅಪ್ಪ ಪುತ್ರಿಗೆ ಬುದ್ಧಿ ಕಲಿಸುವುದಕ್ಕಾಗಿ ಆಕೆಯ ಕೋಣೆಯನ್ನೇ ಜೈಲಾಗಿ ಪರಿವರ್ತಿಸಿದ್ದಾನೆ. ಅಲ್ಲದೇ ಇದನ್ನು ವೀಡಿಯೋ ಮಾಡಿ ಸಬ್‌ಟೈಟಲ್ ಜೊತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ವೀಡಿಯೋದಲ್ಲಿ ತಂದೆ ತನ್ನ ಪುತ್ರಿಯ ಕೋಣೆಯನ್ನು ಸಂಪೂರ್ಣವಾಗಿ ಖಾಲಿ ಮಾಡುವುದನ್ನು ನೋಡಬಹುದು. @WizMonifaaa ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಪುತ್ರಿಯ ಕೋಣೆಯಲ್ಲಿದ್ದ ಕಪಾಟುಗಳಲ್ಲಿ ಇರುವ ಬಟ್ಟೆಗಳು, ವಸ್ತುಗಳನ್ನು ತಂದೆ ಸಂಪೂರ್ಣವಾಗಿ ಖಾಲಿ ಮಾಡುತ್ತಾನೆ. ಬಳಿಕ ಆಕೆಯ ಬೆಡ್‌ ಶಿಟ್‌, ಮ್ಯಾಟ್ರೆಸ್‌ ಸೇರಿದಂತೆ ಸಂಪೂರ್ಣ ಬೆಡ್ ಅನ್ನು ರೂಮ್‌ನಿಂದ ತೆಗೆದು ಬಿಡುತ್ತಾನೆ‌. ಅಲ್ಲದೇ ಆಕೆಯ ರೂಮ್‌ನಲ್ಲಿದ್ದ ಟಿವಿ ಹಾಗೂ ಆಕೆಯ ಶೂಗಳನ್ನು ತೆಗೆದು ಹೊರ ಹಾಕುತ್ತಾನೆ. ಇದು ವೀಡಿಯೋದಲ್ಲಿದೆ.


ನನ್ನ ಮಗಳು ತರಗತಿ ಬಂಕ್ ಮಾಡಿದ್ದಳು, ಆದ್ದರಿಂದ ಅವಳಿಗೆ ಶಿಕ್ಷೆ ನೀಡಲು ಮುಂದಾದೆ, ಅದಕ್ಕೆ ಅವಳ ಸ್ವಂತ ಕೋಣೆಯನ್ನು ಜೈಲಿನ ರೀತಿ ಮಾರ್ಪಡಿಸಿದೆ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.


ಮಗಳು ದಾರಿ ತಪ್ಪುತ್ತಿದ್ದಾಳೆ ಎಂದು ಸಿಟ್ಟಿಗೆದ್ದು ಹತಾಶನಾಗಿ ಈ ರೀತಿ ಕ್ರಮ ಕೈಗೊಳ್ಳಲು ಮುಂದಾದ ಅಪ್ಪನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 34 ಮಿಲಿಯನ್ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.