18 ವರ್ಷಗಳ ನಂತರ ಕೇತು-ಬುಧ ಸಂಯೋಗ, ಈ ರಾಶಿಯವರಿಗೆ ಭಾರೀ ಯಶಸ್ಸು!
Friday, October 4, 2024
ಕನ್ಯಾ ರಾಶಿ
ಕೇತು ಹಾಗೂ ಬುಧನ ಸಂಯೋಗ ಕನ್ಯಾ ರಾಶಿಯಲ್ಲಿ ನಡೀತಾ ಇರೋದು ಕನ್ಯಾ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳದೆ ಹಾಗೂ ವಿಶೇಷವಾಗಿ ಮಾಡುವಂತಹ ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಜೀವನದಲ್ಲಿ ಸಂತೋಷದ ವಾತಾವರಣ ಹಾಗೂ ಪರಿಸ್ಥಿತಿಗಳು ಹೆಚ್ಚಾಗಲಿವೆ ಹಾಗೂ ಕೈ ತುಂಬಾ ಹಣ ಸಂಪಾದನೆ ಮಾಡುವಂತಹ ಅವಕಾಶಗಳು ಕೂಡ ನಿಮಗೆ ಸಿಗಲಿವೆ.
ಧನು ರಾಶಿ
ಕರ್ಮಸ್ಥಾನದಲ್ಲಿ ಈ ಸಂಯೋಗ ನಡೆಯುತ್ತಿರುವುದು ಧನು ರಾಶಿಯವರಿಗೆ ಕೆಲಸ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವ ಹಾಗೆ ಮಾಡುತ್ತೆ. ಸಾಕಷ್ಟು ಸಮಯಗಳಿಂದ ಉತ್ತಮ ಕೆಲಸಕ್ಕಾಗಿ ಕಾಯುತ್ತಿರುವಂತಹ ಜನರಿಗೂ ಕೂಡ ಒಳ್ಳೆಯ ಉದ್ಯೋಗ ದೊರಕುತ್ತದೆ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಗೆ ಹಾಗೂ ಉನ್ನತ ಅಧಿಕಾರಿಗಳ ಜೊತೆಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯವರ ರಾಶಿ ಚಕ್ರದ ಒಂಬತ್ತನೇ ಸ್ಥಾನದಲ್ಲಿ ಈ ಸಂಯೋಗ ಕಂಡುಬರುವುದರಿಂದಾಗಿ ನಿಮ್ಮ ಜೀವನದಲ್ಲಿ ಭಾಗ್ಯೋದಯ ಆಗಲಿದೆ. ದೇಶ ವಿದೇಶದ ಪ್ರಯಾಣ ಮಾಡುವಂತಹ ನಿಮ್ಮ ಕನಸು ಕೂಡ ಈ ಸಂದರ್ಭದಲ್ಲಿ ಈಡೇರುವುದು ನಿಶ್ಚಿತ. ಇದರ ಜೊತೆಗೆ ಈ ಸಂದರ್ಭದಲ್ಲಿ ಸಾಕಷ್ಟು ಧಾರ್ಮಿಕ ಕೆಲಸಗಳಲ್ಲಿ ಕೂಡ ನೀವು ಭಾಗವಹಿಸಲಿದ್ದೀರಿ.