-->

ಆರ್ಥಿಕ ಸಂಕಷ್ಟದಿಂದ ಪಾರಾಗಲು 1.50 ಲಕ್ಷ ಸರ್ಕಾರಿ ಹುದ್ದೆಯನ್ನು ಕಡಿತಗೊಳಿಸಿದ ಪಾಕ್

ಆರ್ಥಿಕ ಸಂಕಷ್ಟದಿಂದ ಪಾರಾಗಲು 1.50 ಲಕ್ಷ ಸರ್ಕಾರಿ ಹುದ್ದೆಯನ್ನು ಕಡಿತಗೊಳಿಸಿದ ಪಾಕ್


ಇಸ್ಲಮಾಬಾದ್: ಆರ್ಥಿಕ ಸಂಕಷ್ಟದಿಂದ ಪಾತಾಳಕ್ಕೆ ಕುಸಿದಿರುವ ಪಾಕಿಸ್ತಾನವು ತನ್ನ ಆಳಿತಾತ್ಮಕ ವೆಚ್ಚ ಕಡಿತಗೊಳಿಸಲು ಸುಮಾರು 1.50 ಲಕ್ಷ ಸರ್ಕಾರಿ ಹುದ್ದೆಯನ್ನು ಕಡಿತಗೊಳಿಸಲು ಹಾಗೂ 6 ಸಚಿವಾಲಯಗಳನ್ನು ಮುಚ್ಚಿ ಇನ್ನೆರಡನ್ನು ವಿಲೀನಗೊಳಿಸಲು ತೀರ್ಮಾನಿಸಿದೆ.

ಪಾಕ್‌ ಅನ್ನು ಆರ್ಥಿಕ ಸಂಕಟದಿಂದ ಪಾರು ಮಾಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಇತ್ತೀಚೆಗೆ 700 ಕೋಟಿ ರೂ. ಸಾಲ ನೀಡಲು ಒಪ್ಪಿತ್ತು. ಆದರೆ ಸಾಲ ನೀಡಲು ಕೆಲವು ಷರತ್ತು ವಿಧಿಸಿತ್ತು. ಇದರಲ್ಲಿ ಅನಗತ್ಯ ಆಡಳಿತಾತ್ಮಕ ವೆಚ್ಚ ಕಡಿತವೂ ಸೇರಿತ್ತು. ಇದಕ್ಕೆ ಪಾಕಿಸ್ತಾನ ಒಪ್ಪಿತ್ತು. ಆದ್ದರಿಂದ ಸೆ.26ರಂದು ಮೊದಲ ಕಂತಿನಲ್ಲಿ 100 ಕೋಟಿ ಡಾಲರ್ ನೀಡಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಪಾಕ್‌ ಹಣಕಾಸು ಸಚಿವ ಮುಹಮ್ಮದ್‌ ಔರಂಗಜೇಬ್‌, ಐಎಂಎಫ್‌ ಜತೆಗಿನ ಒಪ್ಪಂದ ಅಂತಿಮಗೊಳಿಸಲಾಗಿದೆ. ಇದರನ್ವಯ 6 ಸಚಿವಾಲಯಗಳನ್ನು ಮುಚ್ಚಲಾಗುತ್ತದೆ. 2 ಸಚಿವಾಲಯಗಳನ್ನು ವಿಲೀನಗೊಳಿಸಲಾಗುತ್ತದೆ. ಜತೆಗೆ ವಿವಿಧ ಸಚಿವಾಲಯಗಳಲ್ಲಿನ 1,50,000 ಹುದ್ದೆಗಳನ್ನು ತೆಗೆದುಹಾಕಲಾಗುತ್ತದೆ ಎಂದರು. ಇದಲ್ಲದೆ ಸಬ್ಸಿಡಿ ಕಡಿತ, ಕೃಷಿ ಹಾಗೂ ರಿಯಲ್‌ ಎಸ್ಟೇಟ್‌ ಮೇಲೆ ತೆರಿಗೆ ಹೇರಿಕೆ- ಮುಂತಾದ ಕ್ರಮವನ್ನೂ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ. ಕಳೆದ ವರ್ಷ 3 ಲಕ್ಷ ಹಾಗೂ ಈ ವರ್ಷ 7.32 ಲಕ್ಷ ಹೊಸ ತೆರಿಗೆದಾರರನ್ನು ನೋಂದಣಿ ಮಾಡಲಾಗಿದೆ. ವಾಹನ ಹಾಗೂ ಆಸ್ತಿ ಖರೀದಿಗೆ ತೆರಿಗೆ ಪಾವತಿ ಕಡ್ಡಾಯಗೊಳಿಸಲಾಗಿದೆ ಎಂದರು.

ಪಾಕಿಸ್ತಾನ ಈಗಾಗಲೇ ಭಾರೀ ಬಾಹ್ಯ ಸಾಲವನ್ನು ಹೊಂದಿದೆ. ಈ ಪೈಕಿ ಮುಂದಿನ 4 ವರ್ಷಗಳಲ್ಲಿ 24 ಲಕ್ಷ ಕೋಟಿ ರೂ. (ಪಾಕಿಸ್ತಾನ ರೂಪಾಯಿ) ಸಾಲ ಮರುಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಐಎಂಎಫ್‌ ಒಡ್ಡಿದ ಸಾಲಗಳನ್ನು ಮರುಮಾತಿಲ್ಲದೇ ಒಪ್ಪಬೇಕಾದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಮುಂದಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article