ಕೇವಲ 13,000 ರೂ.ಗೆ ಸಿಗಲಿದೆ‌ ಜಿಯೋಬುಕ್ 11 ಲ್ಯಾಪ್‌ಟಾಪ್ - ಇದು ದೀಪಾವಳಿ ಆಫರ್


ಮುಂಬೈ: ರಿಲಯನ್ಸ್ ಜಿಯೋ ಕಳೆದ ವರ್ಷ ಜಿಯೋಬುಕ್ 11 ಲ್ಯಾಪ್‌ಟಾಪನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಈ ಬಾರಿಯ ದೀಪಾವಳಿಗೆ ಈ ಲ್ಯಾಪ್‌ಟಾಪ್ ಮೇಲೆ ಭಾರಿ ರಿಯಾಯಿತಿಯಿದೆ. ದೀಪಾವಳಿ ಆಫರ್ ಮಾರಾಟದಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ 13,000 ರೂ. ಕಡಿಮೆ ಬಜೆಟ್ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಲ್ಯಾಪ್‌ಟಾಪ್ ಖರೀದಿಸಲು ಸೂಕ್ತ. ಈ ಲ್ಯಾಪ್‌ಟಾಪ್ ಅನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ಅಥವಾ ಅಮೆಜಾನ್‌ನಲ್ಲಿ ಖರೀದಿಸಬಹುದು.

ಜಿಯೋಬುಕ್ 11 ಆಂಡ್ರಾಯ್ಡ್ 4G ಲ್ಯಾಪ್‌ಟಾಪ್. ಇದರಲ್ಲಿನ ಕೆಲವು ಆ್ಯಪ್‌ಗಳು ಈಗಾಗಲೇ ಇವೆ. ಇದಲ್ಲದೆ, ಜಿಯೋಬುಕ್ 11 ಆಫೀಸ್ ಸೂಟ್ ಸಂಪೂರ್ಣವಾಗಿ ಉಚಿತ. ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ. ಈ ಲ್ಯಾಪ್‌ಟಾಪ್ JioOS ನಲ್ಲಿ ಕೆಲಸ ಮಾಡುತ್ತದೆ. MediaTek 8788 CPU ಚಿಪ್‌ಸೆಟ್ ಇದೆ. 4G ಮೊಬೈಲ್ ನೆಟ್‌ವರ್ಕ್ ಜೊತೆಗೆ ವೈಫೈ ಸಂಪರ್ಕ ಆಯ್ಕೆಯೂ ಇದೆ.

ಜಿಯೋಬುಕ್ 11 ಬ್ಯಾಟರಿ ಫುಲ್ ಚಾರ್ಜ್ ಮಾಡಿದ್ರೆ 8 ಗಂಟೆ ಬಾಳಿಕೆ ಬರಲಿದೆ ಎಂದು ಜಿಯೋ ಹೇಳಿದೆ. ಬ್ಯಾಟರಿಗೆ 12 ತಿಂಗಳ ವಾರಂಟಿ ನೀಡಲಾಗುತ್ತಿದೆ . 11.6 ಇಂಚಿನ ದೊಡ್ಡ ಡಿಸ್‌ಪ್ಲೇ ಇರುವ ಈ ಲ್ಯಾಪ್‌ಟಾಪ್ ಕೇವಲ ಒಂದು ಕಿಲೋ (990 ಗ್ರಾಂ) ತೂಗುತ್ತದೆ. ಈ ಲ್ಯಾಪ್‌ಟಾಪ್ ವಿವಿಧ ಬಣ್ಣಗಳಲ್ಲಿ ಲಭ್ಯವಿಲ್ಲ. ಕೇವಲ ನೀಲಿ ಬಣ್ಣದಲ್ಲಿ ಮಾತ್ರ ಲಭ್ಯ.

ಜಿಯೋಬುಕ್ 11 ಲ್ಯಾಪ್‌ಟಾಪ್‌ನಲ್ಲಿ 64GB ಸ್ಟೋರೇಜ್ ಮತ್ತು 4GB RAM ಇದೆ. ದೊಡ್ಡ ಟಚ್‌ಪ್ಯಾಡ್ ಮತ್ತು ಕೀಬೋರ್ಡ್ ಇದೆ. ಇದರಿಂದ ಟೈಪ್ ಮಾಡೋದು ಸುಲಭ. ಡೇಟಾ ಸ್ಟೋರ್ ಮಾಡಲು ಇದು ಉಪಯುಕ್ತವಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಈ ಲ್ಯಾಪ್‌ಟಾಪ್ ಎಲ್ಲಾ ಅಗತ್ಯತೆಗಳನ್ನು ಪೂರೈಸಲಿದೆ.

ಈ ಜಿಯೋಬುಕ್ 11 ಲ್ಯಾಪ್‌ಟಾಪ್ ಸಾಮಾನ್ಯ ಬಳಕೆಗೆ ಮಾತ್ರ ಸೂಕ್ತ. ಹೆವಿ ಸಾಫ್ಟ್‌ವೇರ್‌ಗಳನ್ನು ಇದರಲ್ಲಿ ಚಲಾಯಿಸಲು ಸಾಧ್ಯವಿಲ್ಲ. ಆನ್‌ಲೈನ್ ತರಗತಿಗಳಿಗೆ ಇದನ್ನು ಬಳಸಬಹುದು. ವಿದ್ಯಾರ್ಥಿಗಳಿಗೆ ಜಿಯೋಬುಕ್ ಲ್ಯಾಪ್‌ಟಾಪ್ ಸೂಕ್ತವಾಗಿದೆ. ವಿದ್ಯಾರ್ಥಿಗಳ ಅಸೈನ್ಮೆಂಟ್, ಆನ್‌ಲೈನ್ ಕ್ಲಾಸ್ ಸೇರಿದಂತೆ ಹಲವು ಕೆಲಸಗಳಿಗೆ ಇದು ಉಪಯುಕ್ತವಾಗಿದೆ.

ಜಿಯೋಬುಕ್ 11 ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ 16,499 ರೂ.ಗೆ ಬಿಡುಗಡೆಯಾಗಿತ್ತು. ಈಗಿನ ಬೆಲೆ ಇಳಿಕೆಯ ನಂತರ, ಇದರ ಬೆಲೆ 12,890 ರೂ. QuickHeal ಪೇರೆಂಟಲ್ ಕಂಟ್ರೋಲ್ ಸಬ್‌ಸ್ಕ್ರಿಪ್ಶನ್, DigiBoxx ನ 100GB ಕ್ಲೌಡ್ ಸ್ಟೋರೇಜ್ ಈ ಲ್ಯಾಪ್‌ಟಾಪ್ ಜೊತೆ ಉಚಿತವಾಗಿ ಸಿಗುತ್ತದೆ.