ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ವೇಳೆ ರೈಲು ಹಳಿ ಮೇಲೆ ಬಿದ್ದ ಬಿಜೆಪಿ ಶಾಸಕಿ


ಹೊಸದಿಲ್ಲಿ: ಆಗ್ರಾ ಕಂಟೋನ್ಮೆಂಟ್ ಮತ್ತು ಬನಾರಸ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ವೇಳೆ ಎಥವಾ ಜಂಕ್ಷನ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಶಾಸಕಿ ಸರಿತಾ ಭಡೋರಿಯಾ ತಳ್ಳಾಟದಲ್ಲಿ ರೈಲು ಹಳಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಆದರೆ ಅಪಾಯದಿಂದ ಪಾರಾಗಿದ್ದಾರೆ.

ಪ್ಲಾಟ್ ಫಾರಂನಲ್ಲಿ ನಡೆದ ಗೊಂದಲದಲ್ಲಿ ಭದ್ರತಾ ಸಿಬ್ಬಂದಿ ನಿಯಂತ್ರಣ ಕಳೆದುಕೊಂಡ ಕಾರಣ ಭಡೋರಿಯಾ ರೈಲು ಹಳಿಗೆ ಬೀಳಬೇಕಾಯಿತು. ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ತಕ್ಷಣ ನೆರವಿನ ಹಸ್ತ ಚಾಚಿ ಪ್ಲಾಟ್ ಫಾರಂಗೆ ಶಾಸಕಿಯನ್ನು ಎಳೆದುಕೊಂಡರು. ಬಳಿಕ ಸಮಾರಂಭ ಸುಲಲಿತವಾಗಿ ನಡೆದಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಭುಜ್- ಅಹ್ಮದಾಬಾದ್‌ ನಡುವೆ ಭಾರತದ ಮೊಟ್ಟಮೊದಲ ವಂದೇ ಮೆಟ್ರೋ ಸೇವೆಗೆ ಚಾಲನೆ ನೀಡಿದರು. ಜೊತೆಗೆ ನಾಗುರ- ಸಿಕಂದರಾಬಾದ್, ಕೊಲ್ಲಾಪುರ-ಪುಣೆ, ಆಗ್ರಾ-ಕಂಟೋನ್ಮಂಟ್ ಬನಾರಸ್, ದುರ್ಗ್- ವಿಶಾಖಪಟ್ಟಣಂ, ಪುಣೆ-ಹುಬ್ಬಳ್ಳಿ ಮತ್ತು ವಾರಣಾಸಿ- ದೆಹಲಿ ನಡುವಿನ ಮೊಟ್ಟಮೊದಲ 20 ಬೋಗಿಗಳ ವಂದೇಭಾರತ್ ರೈಲುಗಳಿಗೂ ಚಾಲನೆ ನೀಡಿದರು.
BREAKING NEWS
Loading latest news...
Join our WhatsApp Channel Powered By : Online Pudu