ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ಭಾವಿಸಿ ಕನ್ನಡಿ ಹಾವನ್ನು ಹಿಡಿಯಲೆತ್ನ - ವ್ಯಕ್ತಿ ಹಾವು ಕಚ್ಚಿ ಸಾವು



ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ಭಾವಿಸಿರುವ ವ್ಯಕ್ತಿಯೊಬ್ಬರು ಕನ್ನಡಿ ಹಾವನ್ನು ಹಿಡಿಯಲೆತ್ನಿಸಿ ಅದೇ ಹಾವಿನಿಂದ ಕಚ್ಚಿಸಿ ಮೃತಪಟ್ಟ ಘಟನೆ ಬಜ್ಪೆಯಲ್ಲಿ ನಡೆದಿದೆ. 

ಬಜ್ಪೆಯ ರಾಮಚಂದ್ರ ಪೂಜಾರಿ(55) ಮೃತಪಟ್ಟ ದುರ್ದೈವಿ.




ಗುರುವಾರ ಬಜ್ಪೆಯ ಮನೆಯೊಂದರ ಪರಿಸರದಲ್ಲಿ ಕನ್ನಡಿ ಹಾವು ಕಾಣಿಸಿಕೊಂಡಿತ್ತು. ಇದನ್ನು ರಾಮಚಂದ್ರ ಪೂಜಾರಿಯವರು ವಿಷರಹಿತ ಹಾವೆಂದು ತಪ್ಪಾಗಿ ಭ್ರಮಿಸು ಕೈಯಲ್ಲಿ ಹಿಡಿದಿದ್ದಾರೆ. ಆದರೆ ಹಾವು ರಾಮಚಂದ್ರ ಅವರ ಕೈಗೆ ಕಚ್ಚಿದೆ. ಆದರೆ ರಾಮಚಂದ್ರ ಅವರು ಇದೊಂದು ವಿಷರಹಿತ ಹಾವೆಂದು ಹಾವು ಕಚ್ಚಿಸಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಅವರು ತಮ್ಮ ಮನೆಗೆ ತೆರಳಿದ್ದಾರೆ.

ಆದರೆ ಸಂಜೆಯಾಗುತ್ತಲೇ ರಾಮಚಂದ್ರ ಪೂಜಾರಿಯವರಿಗೆ ತಲೆ ತಿರುಗಲಾರಂಭಿಸಿದೆ. ಆರೋಗ್ಯ ಏರುಪೇರಾಗಿದೆ. ತಕ್ಷಣ ಅವರನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶುಕ್ರವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu