-->

ಮನೆಯೊಳಗಿದ್ದ ಐಫೋನ್ ಎಗರಿಸಿ ಟವರ್ ಮೇಲೇರಿದ ಮಂಗ - ಕಂಗಾಲಾದ ಫೋನ್ ಮಾಲಕಿ

ಮನೆಯೊಳಗಿದ್ದ ಐಫೋನ್ ಎಗರಿಸಿ ಟವರ್ ಮೇಲೇರಿದ ಮಂಗ - ಕಂಗಾಲಾದ ಫೋನ್ ಮಾಲಕಿ


ದೊಡ್ಡಬಳ್ಳಾಪುರ: ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕರೆ ಎಂಬ ಗಾದೆ ಮಾತೊಂದಿದೆ. ಅದರಂತೆ ಮಂಗವೊಂದು ಮನೆಯಲ್ಲಿದ್ದ ಮಹಿಳೆಯ ಐಫೋನ್ ಎತ್ತಿಕೊಂಡು ಹೋಗಿ ಮೊಬೈಲ್ ಟವರ್ ಮೇಲೆ ಕುಳಿತಿದ್ದು, ಫೋನ್ ಒಡತಿಗೆ ಉಭಯಸಂಕಟ ಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದಿದೆ.

ರವಿವಾರ ಸಂಜೆ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ. ತುಳಸಿ ಎಂಬವರ ಮನೆಗೆ ನುಗ್ಗಿದ ಮಂಗವೊಂದು ಅವರ ಐಫೋನನ್ನು ಎಗರಿಸಿ ಟವರ್ ಮೇಲೆ ಕುಳಿತಿದೆ. ಮಂಗನಿಂದ ಐಫೋನ್ ಪಡೆಯಲು ಸ್ಥಳೀಯರು ಸಾಕಷ್ಟು ಹರಸಾಹಸಪಟ್ಟಿದ್ದಾರೆ. ಐಫೋನ್ ಕೊಡುವಂತೆ ಜನರು ಎಷ್ಟೇ ಕಾಡಿದ್ರೂ ಬೇಡಿದ್ರೂ, ಮಂಗ ಮಾತ್ರ ಐಫೋನ್ ಕೊಡಲಿಲ್ಲ. ಈ ದೃಶ್ಯ ನೋಡುಗರಿಗೆ ಪುಕ್ಕಟೆ ಮನರಂಜನೆಯನ್ನು ನೀಡಿದೆ. ಮಂಗನಿಗೆ ಆಟ ಐಫೋನ್ ಒಡತಿಗೆ ಸಂಕಟ ತಂದಿಟ್ಟಿದೆ.


ಕೊನೆಗೂ, ಮಂಗ ಐಫೋನ್ ಕೆಳಗೆ ಎಸೆದಿದ್ದು, ಫೋನ್ ಸಿಕ್ತು ಎನ್ನುವ ಖುಷಿಯಲ್ಲಿದ್ದವರಿಗೆ ಮೇಲಿಂದ ಬಿದ್ದ ಮೊಬೈಲ್​ ಸ್ಕ್ರೀನ್ ಒಡೆದು ಹೋಗಿದೆ. ತೂಬಗೆರೆ ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು, ಕೋತಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಜನರು ಆಗ್ರಹಿಸಿದ್ದಾರೆ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article