-->
ಮಗು ಹುಟ್ಟಿದ ದಿನವೇ ಖುಲಾಯಿಸಿತು ಅದೃಷ್ಟ: ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಯೂಟ್ಯೂಬರ್ ಧನರಾಜ್ ಆಚಾರ್ಯ

ಮಗು ಹುಟ್ಟಿದ ದಿನವೇ ಖುಲಾಯಿಸಿತು ಅದೃಷ್ಟ: ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಯೂಟ್ಯೂಬರ್ ಧನರಾಜ್ ಆಚಾರ್ಯ

ಬಂಟ್ವಾಳ: ಯುಟ್ಯೂಬರ್ ಧನರಾಜ್ ಆಚಾರ್ಯ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿ ಧನರಾಜ್ ಆಚಾರ್ಯ ಯೂಟ್ಯೂಬರ್ ಎಂದೇ ಪ್ರಸಿದ್ಧಿ ಪಡೆದವರು. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ. ಅಬ್ಬಬ್ಬಾ ಸಿನಿಮಾದ‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಚಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ವಿವಾಹದ ಬಳಿಕ ಪತ್ನಿ‌ ಪ್ರಜ್ಞಾ ಆಚಾರ್‌ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ತನ್ನ ಅಜ್ಜಿ ಕಮಲಜ್ಜಿ ಯ ಜೊತೆಗೆ ತಮ್ಮ‌ಇಡೀ ಫ್ಯಾಮಿಲಿಯನ್ನು ಜಾಗೃತಿ ವಿಡಿಯೋಗಳಿಗೆ ಬಳಸಿ ಇವರ ಕುಟುಂಬ  ಕಮಲಜ್ಜಿ ಫ್ಯಾಮಿಲಿ ಎನ್ನಿಸಿಕೊಂಡಿತ್ತು.  ಈ ಎಲ್ಲದರ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕಾರಣಕ್ಕೆ ಧನರಾಜ್ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ.

ಧನ್‌ರಾಜ್ ಪತ್ನಿ ಪ್ರಜ್ಞಾ ಹೆಣ್ಣುಮಗುವಿಗೆ ಜನ್ಮ ನೀಡಿದ ಕೆಲವೇ ಸಮಯದಲ್ಲಿ ಬಿಗ್ ಬಾಸ್ ಮನೆಯಿಂದ ಧನ್ ರಾಜ್ ಗೆ ಕರೆ ಬಂದಿದೆ.  ಹೀಗಾಗಿ ಇದು ಮಗುವಿನಿಂದ ಬಂದ ಅದೃಷ್ಟ ಎಂದು ಮನೆಮಂದಿ ಹೇಳಿಕೊಳ್ಳುತ್ತಿದ್ದಾರೆ, ಒಂದು ತಿಂಗಳ ಮಗುವನ್ನು ಬಿಗಿದಪ್ಪಿ ಮುದ್ದಿಸಿ  ಟಾಟಾ ಹೇಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋ ಧನ್ ರಾಜ್  ಬಿಗ್ ಬಾಸ್ ಮನೇನಲ್ಲಿ ಏನ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕಾಗಿದೆ..


ಹಾಸ್ಯದಷ್ಟೇ ಸಾಮಾಜಿಕ ಕಳಕಳಿಗೂ ಹೆಚ್ಚು ಒತ್ತು ನೀಡುವ ಧನರಾಜ್ ಪಂಪ್‌ವೆಲ್ ಫ್ಲೈ ಓವರ್, ಕಲ್ಲಡ್ಕ ಹೆದ್ದಾರಿ, ಉಳ್ಳಾಲ್‌ನ ಒಂಬತ್ತುಕೆರೆ ಪ್ರದೇಶದ ಸರ್ಕಾರಿ ಮನೆಗಳು ಹಾಗೂ ಸುಳ್ಯದಲ್ಲಿ ಉಂಟಾದ ವಿದ್ಯುತ್ ಸಮಸ್ಯೆಗಳ ಕುರಿತಾಗಿ ಸಿದ್ಧಪಡಿಸಿದ್ದ ವಿಡಿಯೋಗಳು ಅತ್ಯಂತ ಹೆಚ್ಚು ಟ್ರೋಲ್ ಆಗಿ ಆಡಳಿತ ವ್ಯವಸ್ಥೆಯ ಕಣ್ತೆರೆಸುವಲ್ಲಿಯೂ ಯಶಸ್ವಿಯಾಗಿದೆ.


Ads on article

Advertise in articles 1

advertising articles 2

Advertise under the article