-->

ಕೇವಲ ಒಂದು ಮೊಬೈಲ್ ಬೆಲೆಗೆ ಲಭ್ಯವಾಗುವ ಈ ಇ-ಸ್ಕೂಟರ್ ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ

ಕೇವಲ ಒಂದು ಮೊಬೈಲ್ ಬೆಲೆಗೆ ಲಭ್ಯವಾಗುವ ಈ ಇ-ಸ್ಕೂಟರ್ ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ


ಬೆಂಗಳೂರು: ಕೇವಲ ಒಂದು ಮೊಬೈಲ್ ಬೆಲೆಯ ಮೌಲ್ಯವುಳ್ಳ ಈ ಇಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ಗೆ 250 ಕಿ.ಮೀ. ಸಂಚರಿಸುತ್ತದೆ. ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ಸ್ಕೂಟರ್‌ನ ಹೆಸರು ಓಲಾ ಎಸ್1. ಓಲಾ ಕಂಪೆನಿಯ ಈ ಫುಲ್ ಇಲೆಕ್ಟ್ರಿಕ್ ಸ್ಕೂಟರ್ ಸಖತ್ ಪರ್ಫಾಮೆನ್ಸ್ ಕೊಡುತ್ತದೆ. ಈ ಸ್ಕೂಟರ್‌ನಲ್ಲಿ 2-3 ಬ್ಯಾಟರಿ ವೇರಿಯೆಂಟ್ ಲಭ್ಯವಿದೆ.


ಎಲ್ಲರೂ ತಮ್ಮ ಬಜೆಟ್‌ಗೆ ತಕ್ಕಂತೆ ಈ ಸ್ಕೂಟರ್‌ಅನ್ನು ಖರೀದಿಸಬಹುದು. ಓಲಾ ಕಂಪೆನಿಯ ಈ ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 2.3 ಕಿಲೋವ್ಯಾಟ್ ಮೋಟಾರ್ ಸಿಗುತ್ತದೆ. ಈ ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ನೀವು ರೈಡಿಂಗ್ ಮೋಡ್‌ಗಳು ಲಭ್ಯವಿದೆ. ಈಗ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು ಎಂದು ನೋಡೋಣ. ಓಲಾ ಕಂಪೆನಿಯ ಈ ಇಲೆಕ್ಟ್ರಿಕ್ ಸ್ಕೂಟರ್‌ನ ವಿಷ್ಯಕ್ಕೆ ಬಂದ್ರೆ, ಈ ಸ್ಕೂಟರ್ ನಾಲ್ಕು ವೆರಿಯಂಟ್‌ಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಿದೆ. ಇದರ ಆರಂಭಿಕ ವೆರಿಯಂಟ್‌ನ ಬೆಲೆ 94,111 ರೂ. ಇದು ಕಡಿಮೆ ಬೆಲೆಯ ವೆರಿಯಂಟ್.


ಈ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಎಷ್ಟು ಸ್ಪೀಡ್‌ನಲ್ಲಿ ಹೋಗುತ್ತದೆ ಎಂದು ನೋಡುವುದಾರೆ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ನ ಸ್ಪೀಡ್ ಪ್ರತಿಯೊಂದು ಮಾಡೆಲ್‌ಗೂ ಬೇರೆ ಬೇರೆ ಇರುತ್ತದೆ. ಅವುಗಳೆಂದರೆ, ಓಲಾ ಎಸ್1 ಏರ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 80 ಕಿ.ಮೀ. ಓಲಾ ಎಸ್1 ಸ್ಕೂಟರ್‌ನ ವೇಗ ಗಂಟೆಗೆ 95 ಕಿ.ಮೀ. ಓಲಾ ಎಸ್1 ಪ್ರೊ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 116 ಕಿ.ಮೀ. ಹಾಗಾಗಿ ಓಲಾ ಸ್ಕೂಟರ್‌ನ ವಿಶೇಷ ಅಂದ್ರೆ ಅದು ಬ್ಯಾಟರಿ ಬ್ಯಾಕಪ್. ಈ ಸ್ಕೂಟರ್ ಬ್ಯಾಟರಿ ಬ್ಯಾಕಪ್ ವಿಷಯದಲ್ಲಿ ಉಳಿದ ಎಲ್ಲಾ ಸ್ಕೂಟರ್‌ಗಳಿಗಿಂತಲೂ ಮುಂದಿದೆ.


ಓಲಾ ಎಲೆಕ್ಟ್ರಿಕ್ ಎಸ್1ನ ಪ್ರಮುಖ ಆಕರ್ಷಣೆ ಅಂದ್ರೆ ಅದರ ಸ್ಮಾರ್ಟ್ ಫೀಚರ್‌ಗಳು. ವೇಗ, ಬ್ಯಾಟರಿ ಚಾರ್ಜ್ ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನ ನೀಡುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯ ಈ ಹೊಸ ಮಾಡೆಲ್, ಪರ್ಫಾಮೆನ್ಸ್ ಮತ್ತು ಫೀಚರ್‌ಗಳಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತಿದೆ. ಗ್ರಾಹಕರ ಸುರಕ್ಷತೆ ಮತ್ತು ಅನುಕೂಲತೆಯನ್ನ ಗಮನದಲ್ಲಿಟ್ಟುಕೊಂಡು, ಇದರಲ್ಲಿ ಉತ್ತಮ ದರ್ಜೆಯ ಫೀಚರ್‌ಗಳನ್ನ ನೀಡಲಾಗಿದೆ. ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಡಿಜಿಟಲ್ ಟ್ರಿಪ್ ಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ನ್ಯಾವಿಗೇಷನ್ ಸಿಸ್ಟಂ, ಕಾಲ್ ಅಲರ್ಟ್ ಮತ್ತು ಎಸ್‌ಎಂಎಸ್ ಅಲರ್ಟ್‌ಗಳಂತಹ ಫೀಚರ್‌ಗಳನ್ನ ನೀಡಲಾಗುತ್ತಿದೆ.


ಫುಟ್‌ರೆಸ್ಟ್, ಸಿಂಗಲ್ ಪೀಸ್ ಸೀಟ್, ಎಕ್ಸ್‌ಟರ್ನಲ್ ಮತ್ತು ಗ್ರಾಹಕರಿಗೆ ಅನುಕೂಲಕರವಾದ ಬ್ರೇಕಿಂಗ್ ಸಿಸ್ಟಂ ಇದರಲ್ಲಿದೆ. ಇದಲ್ಲದೆ, ಇತ್ತೀಚಿನ ಹೆಡ್‌ಲೈಟ್ ಮತ್ತು ಎಲ್‌ಇಡಿ ಹೆಡ್‌ಲೈಟ್‌ಗಳನ್ನ ನೀಡಲಾಗಿದೆ. ನಿಮ್ಮ ಬಜೆಟ್ ಕಡಿಮೆ ಇದ್ರೆ ಚಿಂತೆ ಮಾಡೋ ಅಗತ್ಯ ಇಲ್ಲ. ಫೈನಾನ್ಸ್ ಮೂಲಕವೂ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬಹುದು. ಕೇವಲ 30,000 ರೂಪಾಯಿ ಡೌನ್ ಪೇಮೆಂಟ್ ಮಾಡಿ ಈ ಸ್ಕೂಟರ್‌ ಅನ್ನು ಮನೆಗೆ ತರಬಹುದು. ಪ್ರತಿ ತಿಂಗಳು 4,000 ರೂಪಾಯಿ ಇಎಂಐ ಕಟ್ಟಬೇಕಾಗುತ್ತದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article