ಭುವನೇಶ್ವರ: ಒಡಿಶಾ ಸರಕಾರವು 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಹಿಳೆಯರಿಗೆ ವೇತನ ಸಹಿತ (ಪಿಎಂಎಲ್) ಮುಟ್ಟಿನ ರಜೆಯನ್ನು ಘೋಷಿಸಿದೆ.
ಈ ರಜೆಯನ್ನು ಮುಟ್ಟಿನ ಮೊದಲ ಅಥವಾ ಎರಡನೇ ದಿನದಂದು ತೆಗೆದುಕೊಳ್ಳಬಹುದು.ಈ ರಜೆಯು ಸಂಪೂರ್ಣ ಐಚ್ಚಿಕವಾಗಿರಲಿದೆ. ಮಹಿಳೆಯರು ರಜೆಯನ್ನು ತೆಗೆದುಕೊಳ್ಳದೆಯೂ ಇರಬಹುದು ಎಂದು ಕಟಕ್‌ನಲ್ಲಿ ನಡೆದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಹೇಳಿದರು. ಪ್ರವತಿ ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆಗಿದ್ದಾರೆ.
ಕೀನ್ಯಾದಲ್ಲಿ ವಿಶ್ವ ಸಂಸ್ಥೆಯ ಸಿವಿಲ್ ಸೊಸೈಟಿ ಕಾನ್ಸರೆನ್ಸ್ 2024ರಲ್ಲಿ ಭಾಗವಹಿಸಿದ್ದ ಒಡಿಶಾದ ಬಾಲಕಿಯೊಬ್ಬಳು, ವೇತನ ಸಹಿತ ಮುಟ್ಟಿನ ರಜೆ ನೀಡಬೇಕು ಎಂಬ ವಿಷಯದ ಕುರಿತು ಮಾತನಾಡಿದ್ದಳು. ಮಹಿಳಾ ಪರ ಹೋರಾಟಗಾರ್ತಿ ರಂಜಿತಾ ಪ್ರಿಯದರ್ಶಿನಿ ಅವರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು.