ಜಮ್ಮು ಮತ್ತು ಕಾಶ್ಮೀರ: ದೋಡಾ ಜಿಲ್ಲೆಯಲ್ಲಿ ಕಂದಕಕ್ಕೆ ಬಿದ್ದ ಬಸ್- ಇಬ್ಬರು ಸಾವು
Sunday, July 14, 2024
ದೋಡಾ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾಲೆಸ್ಸಾದಿಂದ ಥಾತ್ರಿಗೆ ತೆರಳುತ್ತಿದ್ದ ಬಸ್ ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಂದರಕ್ಕೆ ಧುಮುಕಿತು.
ಅಧಿಕಾರಿಗಳ ಪ್ರಕಾರ, ಒಂಬತ್ತು ಜನರನ್ನು ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ದೋಡಾಕ್ಕೆ ದಾಖಲಿಸಲಾಗಿದೆ. ಅಪಘಾತದ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಡೆಪ್ಯುಟಿ ಕಮಿಷನರ್ ದೋಡಾ ಹರ್ವಿಂದರ್ ಸಿಂಗ್ ಮಾತನಾಡಿ ಅಪಘಾತದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಅಪಘಾತವನ್ನು ತಪ್ಪಿಸಲು ಚಾಲಕನ ಪ್ರಯತ್ನಗಳನ್ನು ಶ್ಲಾಘಿಸಲಾಗಿದೆ ಎಂದು ತಿಳಿಸಿದ್ದಾರೆ.