ಕೆಎಸ್ಆರ್‌ಟಿಸಿ ಬಸ್ - ಕಾರು ನಡುವೆ ಭೀಕರ ಅಪಘಾತ : ಇಬ್ಬರು ಮೃತ್ಯು


ಚಾಮರಾಜನಗರ: ಕೆಎಸ್ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಕಾರು ಚಾಲಕ ಸಹಿತ ಇಬ್ಬರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಶನಿವಾರ ರಾತ್ರಿ ನಡೆದಿದೆ.

ನಗರದ ಅಂಬೇಡ್ಕ‌ರ್ ಬಡಾವಣೆಯ ವಿದ್ಯುತ್‌ ಗುತ್ತಿಗೆದಾರ ಮಹೇಶ್, ದರ್ಶನ್ ಮೃತಪಟ್ಟವರು. ಕಾರು ಚಾಲಕ ಕಿಟ್ಟಿ ಹಾಗೂ ಸಚಿನ್‌ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಓವ‌ರ್ ಟೇಕ್ ಮಾಡುವ ಭರದಲ್ಲಿ ನಡೆದ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಜಿಲ್ಲಾ ಸಬ್ ಇನ್‌ಸೆಕ್ಟರ್ ಸಾಹೇಬಗೌಡ ಭೇಟಿ ನೀಡಿ ಮೃತರನ್ನು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರು. ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕವಿತಾ ಬಿ.ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.