ಜು.9 ರಂದು ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ವಿದ್ಯುತ್‌ ನಿಲುಗಡೆ- ಹೆಚ್ಚಿನ ಮಾಹಿತಿ ಇಲ್ಲಿದೆ



 

ಮಂಗಳೂರು,: ಕುಲಶೇಖರ 110/33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಇಂಡಸ್ಟ್ರಿಯಲ್‌ ಫೀಡರ್‌ ಮತ್ತು 11 ಕೆ.ವಿ. ದತ್ತನಗರ ಫೀಡರ್‌ ವ್ಯಾಪ್ತಿಗಳಲ್ಲಿ ಜು. 9ರಂದು ಬೆಳಗ್ಗೆ 10ರಿಂದ ಸಂಜೆ  5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

 

 ಈ ಫೀಡರ್‌ಗಳಲ್ಲಿ ಅಂದು ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಅದುದರಿಂದ ಬಿಕರ್ನಕಟ್ಟೆ, ಕಲಾಯಿ ಕಂಡೆಟ್ಟು, ಜಯಶ್ರೀಗೇಟ್‌, ನಾಯ್ಗರಲೇನ್‌, ದತ್ತನಗರ, ಮೇಕೆದಗುಡ್ಡೆ, ವಲ್ಲಿ ಕಂಪೌಂಡ್‌, ಪದವು, ಶರ್ಬತ್ ಕಟ್ಟೆ, ಇಂಡಸ್ಟ್ರಿಯಲ್‌ ಎಸ್ಟೇಟ್‌ ಏರಿಯಾ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

 

ಮೂಡುಬೆಳ್ಳೆ: ಜು. 9 ರಂದು ವಿದ್ಯುತ್‌ ನಿಲುಗಡೆ

 

ಮಣಿಪಾಲ 110/33/11 ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೂಡುಬೆಳ್ಳೆ ಫೀಡರ್ ಮಾರ್ಗದಲ್ಲಿ ಜು.9 ರ೦ದು  ನಿರ್ವಹಣೆ ಕಾಮಗಾರಿಯನ್ನು ಹಮ್ಮಿ ಕೊಳ್ಳಲಾಗಿದೆ. ಅದುದರಿ೦ದ  ಅಂದು

ಬೆಳಗ್ಗೆ 9 ರಿಂದ ಸಂಜೆ  5  ಗಂಟೆಯವರೆಗೆ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

ಉಪ್ಪೂರು/ಚೇರ್ಕಾಡಿ

 

ಬ್ರಹ್ಮಾವರ 110/11 ಕೆ.ವಿ. ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ. ಉಪ್ಪೂರು ಮತ್ತು ಚೇರ್ಕಾಡಿ ಫೀಡರ್ ಮಾರ್ಗದಲ್ಲಿ ಜು.9ರಂದು  ಹೆಚ್.ಟಿ./ಎಲ್.ಟಿ. ಮಾರ್ಗ ಸ್ಥಳಾಂತರ ಹಾಗೂ ತುರ್ತು ನಿರ್ವಹಣೆ ಕಾಮಗಾರಿ

ಹಮ್ಮಿಕೊಳ್ಳಲಾಗಿದೆ. ಅದುದರಿಂದ ಆ ದಿನ ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ ರೋಡ್, ಕೋಟೆ ರೋಡ್, ನಿಡಂಬಳ್ಳಿ, ಕಲ್ಯಾಣಪುರ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಬೆಳಪು/ಮಲ್ಲಾರು

 

ಬೆಳಪು 110/11 ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮಲ್ಲಾರು ಫೀಡರ್ ಮಾರ್ಗದಲ್ಲಿ  ಜು.9  ರಂದು ಹೊಸದಾಗಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅದುದರಿಂದ ಬೆಳಗ್ಗೆ 9 ರಿಂದ ಸಂಜೆ ಸಂಜೆ 5.30 ಗಂಟೆಯವರೆಗೆ   ಮಲ್ಲಾರು, ಪಕೀರ್ಣಕಟ್ಟೆ, ಬೆಳಪು, ಮಜೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಕಾಕ೯ಳ, ಹೆಬ್ರಿ : ವಿದ್ಯುತ್‌ ನಿಲುಗಡೆ

 

ಕಾರ್ಕಳ ಹಾಗೂ ಹೆಬ್ರಿಯ ವಿವಿದೆಡೆ  ಜು. 9 ರಂದು  ವಿದ್ಯುತ್‌ ನಿಲುಗಡೆಯಾಗಲಿದೆ.

 

 

ಕೇಮಾರ್  220/110/11 ಕೆ.ವಿ. ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ. ಬಜಗೋಳಿ, ಹೊಸ್ಮಾರು, ಮಿಯ್ಯಾರು, ಸಾಣೂರು, ಇರ್ವತ್ತೂರು ಫೀಡರ್ ಗಳಲ್ಲಿ,

110/11 ಕೆ.ವಿ. ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರ್ ಗಳಾದ ಬೆಳ್ಮಣ್, ನಂದಳಿಕೆ ಫೀಡರ್ ಗಳಲ್ಲಿ, ಹಾಗೂ 33/11 ಕೆ.ವಿ. ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ. ಹೆಬ್ರಿ ಫೀಡರ್ ಗಳಲ್ಲಿ  ಜು. 9   ರಂದು ಬೆಳಗ್ಗೆ 9  ರಿಂದ ಸಂಜೆ  5  ಗಂಟೆಯವರೆಗೆ ಲೈನ್ ಶಿಫ್ಟಿಂಗ್ / ಮಾರ್ಗನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕಾರ್ಕಳ ತಾಲೂಕಿನ ಬಜಗೋಳಿ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಕುಂಟಿಬೈಲು, ಮಿಯ್ಯಾರು, ರೆಂಜಾಳ, ಬೊರ್ಕಟ್ಟೆ, ರಾಮೇರಗುತ್ತು, ಕಾಜರಬೈಲು, ಅಡ್ಕರಪಲ್ಕೆ, ಕುರ್ಕಲ್ ಪಲ್ಕೆ, ಹಿನಾಪಾಡಿ, ನೆಲ್ಲಿಗುಡ್ಡೆ, ಕಳತ್ರಪಾದೆ, ಮಂಜಡ್ಕ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ಪಾಡಿ, ದೇಂದಬೆಟ್ಟು, ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ಬಾವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಬೆಳ್ಮಣ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಮಣ್ ದೇವಸ್ಥಾನ, ನಂದಳಿಕೆ, ಕೆದಿಂಜೆ, ಇಟ್ಟಮೇರಿ ಮಾವಿನಕಟ್ಟೆ, ದೇಂದೊಟ್ಟು ಪದವು ಹಾಗೂ  ಹೆಬ್ರಿ ತಾಲೂಕಿನ ಮಠದಬೆಟ್ಟು, ಗುಳಿಬೆಟ್ಟು, ಹೆಬ್ರಿ ಪೇಟೆ ಮತ್ತು  ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.