ಕ್ಲೀನ್ ಶೇವ್ ಮಾಡೋದು ತಪ್ಪೇ? ಅದಕ್ಕೆ ಈ ರೀತಿ ಮಾಡೋದೆ ತಂದೆ..! - video

ನವದೆಹಲಿ: ಬೆಳೆದು ನಿಂತಿರುವ ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಕೆಲವರು ಬುದ್ಧಿವಾದ ಹೇಳುವಾಗ ಎರಡೇಟು ಹೊಡೆದು ಅವರನ್ನು ಸರಿ ದಾರಿಗೆ ತರುವ ಯತ್ನ ಮಾಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಪುತ್ರ ಕ್ಲೀನ್ ಶೇವ್ ಮಾಡಿಸಿಕೊಂಡ ಎಂಬ ಕಾರಣಕ್ಕೆ ಅಮಾನುಷವಾಗಿ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಇದರ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಲ್ಲಿಯರೆವಗೆ 12.9 ಮಿಲಿಯನ್ ವೀನ್ಸ್ ಪಡೆದುಕೊಂಡಿದೆ. ಯುವಕನ ತಂದೆಯ ಅತಿರೇಕದ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ಆತನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಈ ಘಟನೆ ಭಾರತದ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.


ವೈರಲ್ ಆಗಿರುವ ವಿಡಿಯೋದಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಬಂದಿರುವ ಯುವಕ ತನ್ನ ತಂದೆಗೆ ಸರ್ಪ್ರೈಸ್ ನೀಡಲು ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಾನೆ. ಹಿಂದಿನಿಂದ ಬಂದ ತಂದೆ ಆತನ ಹೊಸ ಲುಕ್ ನೋಡಿ ಗಡ್ಡ ಮೀಸೆ ಯಾಕೆ ಬೋಳಿಸಿದ್ದೀಯಾ ಎಂದು ಹೇಳುತ್ತಾ ಏಕಾಏಕಿ ಕಪಾಳಕ್ಕೆ ಬಾರಿಸುತ್ತಾನೆ. ಬಳಿಕ ಆತನ ಕುತ್ತಿಗೆ ಹಿಡಿದು ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಯುವಕನ ತಂದೆಯ ಬಗ್ಗೆ ಕಿಡಿಕಾರಿದ್ದು, ಮಕ್ಕಳಿಗೆ ತಮ್ಮಿಷ್ಟದಂತೆ ಕ್ಲೀನ್ ಶೇವ್ ಮಾಡಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲವೇ. ಇಂತಹ ತಂದೆಯನ್ನು ನಾವೆಲ್ಲಿಯೂ ನೋಡಿಲ್ಲ. ತಕ್ಷಣ ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸುವುದು ವಾಸಿ ಎಂದು ಕಮೆಂಟ್ ಹಾಕಿ ಕಿಡಿಕಾರಿದ್ದಾರೆ.