-->
1000938341
ಪಾಕ್ ನೊಂದಿಗೆ ಭಾರತ ಕ್ರಿಕೆಟ್ ಆಟವಾಡಬಾರದು - ಯು.ಟಿ.ಖಾದರ್ ( VIDEO)

ಪಾಕ್ ನೊಂದಿಗೆ ಭಾರತ ಕ್ರಿಕೆಟ್ ಆಟವಾಡಬಾರದು - ಯು.ಟಿ.ಖಾದರ್ ( VIDEO)





ಮಂಗಳೂರು: ಪಾಕ್ ನೊಂದಿಗೆ ಭಾರತ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲೇ ಬಾರದು. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.


ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಇಂಡಿಯಾ - ಪಾಕಿಸ್ತಾನದ ನಡುವೆ  ಟಿ-20 ವಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ಹಿನ್ನಲೆಯಲ್ಲಿ ಮಾತನಾಡಿದ ಅವರು, ಹಿಂದೆ ಪಾಕಿಸ್ತಾನದವರು ಕ್ರಿಕೆಟ್ ಆಟವಾಡಲು ಬಂದ ವೇಳೆ ಪಿಚ್ ಅಗೆದಿದ್ದರು. ವಿನಾ ಕಾರಣ ಪ್ರತಿಭಟನೆ ಮಾಡಿದ್ದರು. ಆದ್ದರಿಂದ ಎಲ್ಲಿಯವರೆಗೆ ನಮಗೆ ಅವರು ಸಮಸ್ಯೆ ಕೊಡುತ್ತಾರೋ, ಅಲ್ಲಿಯವರೆಗೆ ನಾವು ಅವರೊಂದಿಗೆ ಆಟವಾಡಲೇಬಾರದು ಎಂದು ಹೇಳಿದರು.





ಎರಡೂ ದೇಶಗಳ ನಡುವೆ ಸಂಚಾರ ಮಾಡುವುದನ್ನೂ ನಿಲ್ಲಿಸಲಾಗಿದೆ. ಅಲ್ಲದೆ ಅವರು ನಮ್ಮಲ್ಲಿಗೆ ಬಂದು ಆಟವಾಡುವುದನ್ನೂ ನಿಲ್ಲಿಸಲಾಗಿದೆ. ಇಷ್ಟಾದ ಮೇಲೆ ಪಾಕಿಸ್ತಾನದ ಆಟಗಾರರನ್ನು ದುಬೈ, ನ್ಯೂಯಾರ್ಕ್‌ ಗೆ ಕರೆದೊಯ್ದು ಅಲ್ಲಿ ಅವರೊಂದಿಗೆ ಭಾರತದ ಆಟಗಾರರು ಆಡುವುದೆಂದರೆ ಏನು ಅದರ ಅರ್ಥ?. ಎಲ್ಲಿಯವರೆಗೆ ಪಾಕ್ ನವರು ಭಾರತ ಹೇಳುವುದನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ಅವರೊಂದಿಗೆ ಆಟವಾಡುವುದು ಬೇಡ. ಅವರೊಂದಿಗೆ ಆಟವಾಡದಿದ್ದರೆ ಕ್ರಿಕೆಟ್ ಆಟ ಮುಂದೆ ಹೋಗುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.


ಶಾಲಾ-ಕಾಲೇಜುಗಳ ದಿನಗಳಲ್ಲಿ ನಾನೂ ಓರ್ವ ಕ್ರಿಕೆಟ್ ಆಟಗಾರ. ಕ್ರಿಕೆಟ್ ಅಭಿಮಾನಿಯೂ ಹೌದು. ಆದ್ದರಿಂದ T -20 ವರ್ಲ್ಡ್‌ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ತಂಡ ಕಪ್ ಗೆಲ್ಲಬೇಕೆಂದು ಆಶಿಸಿ, ಪ್ರಾರ್ಥಿಸುತ್ತೇನೆ. ನಾಳೆ ಪಾಕ್ ನೊಂದಿಗೆ ನಡೆಯುವ ಪಂದ್ಯಾಟದಲ್ಲಿ ಭಾರತದ ತಂಡ ಗೆಲುವು ಸಾಧಿಸುವುದು ಮಾತ್ರವಲ್ಲ ಇಡೀ ದೇಶಕ್ಕೆ ಗೌರವದ ಗೆಲುವನ್ನು ತರಬೇಕು. ಅದೇ ರೀತಿ ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅತ್ಯಂತ ಹೀನಾಯ ಸೋಲನ್ನು ಅನುಭವಿಸುವಂತೆ ಮಾಡಲು ದೇವರು ನಮ್ಮ ಆಟಗಾರರಿಗೆ ಶಕ್ತಿ ತುಂಬಲಿ ಎಂದು ಯು.ಟಿ.ಖಾದರ್ ಆಶಿಸಿದರು.






Ads on article

Advertise in articles 1

advertising articles 2

Advertise under the article