UDUPI: ಹಾಲು ಕುಡಿದು ಮಲಗಿದ್ದ ಮಗು ಸಾವು
Thursday, June 20, 2024
ಗಂಗೊಳ್ಳಿ : ಎದೆಹಾಲು ಕುಡಿದು ಮಲಗಿದ್ದ ಗುಜ್ಜಾಡಿ ಗ್ರಾಮದ ನೇತ್ರಾವತಿ ಅವರ 43 ದಿನದ ಹೆಣ್ಣು ಮಗು ಮೃತಪಟ್ಟಿದೆ.
ಜೂ. 18ರ ಬೆಳಗ್ಗೆ 8 ಗಂಟೆಯ ಸುಮಾರಿಗೆ ನೇತ್ರಾವತಿ ಅವರು ಮಗು ಶಾನ್ಯಾಳಿಗೆ ಎದೆ ಹಾಲು ಕುಡಿಸಿ ಕೊಠಡಿಯಲ್ಲಿ ಮಲಗಿಸಿ ಹೊರಗೆ ಬಂದಿದ್ದರು.
ಸ್ವಲ್ಪ ಸಮಯದ ಬಳಿಕ ನೇತ್ರಾವತಿಯವರ ತಂದೆ ಲಕ್ಷ್ಮಣ ಅವರು ಮಗುವನ್ನು ನೋಡಲು ಕೊಠಡಿಗೆ ಹೋದಾಗ ಮಗು ಉಸಿರಾಡದೇ, ಮೈ ತಣ್ಣಗಾಗಿರುವುದು ಕಂಡು ಬಂದಿತ್ತು. ಮುಟ್ಟಿದಾಗಲೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಲಕ್ಷ್ಮಣ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.