KSRTC ಬಸ್ಸಿನಲ್ಲಿಯೇ ಹೃದಯಾಘಾತ: ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣಬಿಟ್ಟ ವೃದ್ಧ

Photo- AI


ಉತ್ತರ ಕನ್ನಡ: ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹಡಿನಬಾಳ ಬಳಿ ನಡೆದಿದೆ. ಹಡಿನಬಾಳ ಗ್ರಾಮದ ಕೃಷ್ಣ ಶೆಟ್ಟಿ(70) ಹೃದಯಾಘಾತದಿಂದ ಮೃತಪಟ್ಟವರು.


ಅವರು ಹೊನ್ನಾವರದ ಮಾರುಕಟ್ಟೆಗೆ ತೆರಳಿ ಹೊನ್ನಾವರದಿಂದ ಗೇರುಸೊಪ್ಪ ಕಡೆಗೆ ತೆರಳುತ್ತಿದ್ದ ಬಸ್​ನಲ್ಲಿ ವಾಪಸಾಗುತ್ತಿದ್ದ ಬಸ್ ಮುಂಭಾಗದ ಸೀಟಿನಲ್ಲಿ ಕುಳಿತ ಅವರಿಗೆ ಅಲ್ಲಿಯೆ ಹೃದಯಾಘಾತವಾಗಿದೆ. ಹೃದಯಾಘಾತವಾಗಿರುವುದನ್ನು ಗಮನಿಸಿದ ಬಸ್​ ಚಾಲಕ ಬಸ್‌ನಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಹಿರಿಯ ವ್ಯಕ್ತಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ