ಕುತ್ತಾರು ಕೊರಗಜ್ಜನ ಕ್ಷೇತ್ರದ ಹೆಸರಿನಲ್ಲಿ ನಕಲಿ ಫೇಸ್‌ಬುಕ್ - ದೇಣಿಗೆ ಕೊಡುವಂತೆ ಮನವಿ


 


ಮಂಗಳೂರುಇಲ್ಲಿನ ಕುತ್ತಾರುವಿನಲ್ಲಿರುವ ಪ್ರಸಿದ್ಧ ಕೊರಗಜ್ಜನ ಕ್ಷೇತ್ರದ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ತೆರೆದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

"ಡಿವೋಟೀಸ್ ಆಫ್ ಕುತ್ತಾರು ಕೊರಗಜ್ಜಎಂಬ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಪೇಜ್ ತೆರೆಯಲಾಗಿದೆ ಪೇಜ್ ನಲ್ಲಿ ನಾವು ಕಷ್ಟದಲ್ಲಿದ್ದೇವೆಕೊರಗಜ್ಜನ ಭಕ್ತರು ಹಣದ ಸಹಾಯ ಮಾಡಿಪವಾಡಗಳಿಗೆ ನಂಬಿಕೆಯ ಕೀಲಿಕೈ ಎಂದು ಬರೆದುಕೊಳ್ಳಲಾಗಿದೆಜೊತೆಗೆ ಕೊರಗಜ್ಜನ ಫೋಟೋ ಹಾಕಿ ಶೈಕ್ಷಣಿಕ ಉದ್ದೇಶಗಳಿಗೆ ದಯವಿಟ್ಟು 200 ರೂಸಹಾಯ ಮಾಡಿ ಎಂದು ಪೋಸ್ಟ್ ಹಾಕಲಾಗಿದೆಇದೇ ಪೋಸ್ಟ್ ಅನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದುಕೆನರಾ ಬ್ಯಾಂಕ್ ಐಎಫ್ಎಸ್ ಸಿ ಕೋಡ್ ಸಹಿತ ಬ್ಯಾಂಕ್ ಖಾತೆಯನ್ನೂ ನೀಡಲಾಗಿದೆ.

 


"ದೇವರು ನಮ್ಮನ್ನು ನೋಡುತ್ತಿದ್ದಾನೆಎಂಬ ತಲೆಬರಹದಲ್ಲಿ ಮತ್ತೊಂದು ಪೋಸ್ಟ್ ಹಾಕಲಾಗಿದ್ದುದೇವರು ನಮ್ಮನ್ನು ನೋಡುತ್ತಿದ್ದಾನೆಆತನ ಮಾರ್ಗದರ್ಶನ ಯಾವಾಗಲೂ ನಮ್ಮೊಂದಿಗಿದೆಹಣದ ಸಹಾಯಕ್ಕಾಗಿ ಬೇಡಿಕೊಳ್ಳುತ್ತೇನೆ ಎಂದು ಬರೆಯಲಾಗಿದೆಎಲ್ಲಾ ಪೋಸ್ಟ್ಗಳ ಕೆಳಗಡೆ ಕೀರ್ತಿ ಮೆಹ್ರಾ ಎಂಬ ಹೆಸರು ಬರೆದು ಬ್ಯಾಂಕ್ ಖಾತೆ ಸಂಖ್ಯೆ ಹಾಕಲಾಗಿದೆಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಹಣಕಾಸಿನ ಸಹಾಯಕ್ಕಾಗಿ ಧನ್ಯವಾದಗಳು ಎಂಬ ಕಮೆಂಟ್ ಬಂದಿದೆಸದ್ಯ ಖಾತೆಗೆ ಸಾರ್ವಜನಿಕರುಕೊರಗಜ್ಜನ ಭಕ್ತರು ಹಣ ಹಾಕಿದಂತಿದೆ.

 


 ಬಗ್ಗೆ ಕುತ್ತಾರಿನ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗ ತನಿಯ ಸೇವಾ ಟ್ರಸ್ಟ್ ನವರು ಪೊಲೀಸರಿಗೆ ದೂರು ನೀಡಿದ್ದುನಕಲಿ ಖಾತೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆಕುತ್ತಾರು ಕೊರಗಜ್ಜನ ಆದಿಸ್ಥಳದ ಆಡಳಿತ ಮಂಡಳಿಯ ಯಾವುದೇ ಉದ್ದೇಶಕ್ಕಾಗಿ ಆನ್ಲೈನ್ ಮೂಲಕ ದೇಣಿಗೆ ಸಂಗ್ರಹಿಸುವುದಿಲ್ಲಶ್ರೀಕ್ಷೇತ್ರದಲ್ಲಿ ಆನ್ಲೈ‌‌ನ್ ಸೇವೆಯಾಗಲೀದೇಣಿಗೆ ಸಂಗ್ರಹವಾಗಲೀ ಇರುವುದಿಲ್ಲಕ್ಷೇತ್ರದ ಹೆಸರಲ್ಲಿ ಯಾವುದೇ ರೀತಿಯ ಪ್ರಕಟಣೆಗಳು ಬಂದಲ್ಲಿ ಅಂತಹ ಮನವಿಗೆ ಸ್ಪಂದಿಸಬಾರದಾಗಿ ವಿನಂತಿಸುತ್ತೇವೆತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೃತ್ಯ ಇದಾಗಿದ್ದು ಜಾಲತಾಣದಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆಕ್ಷೇತ್ರದಲ್ಲಿ ನಡೆಯುವ ಎಲ್ಲ ಸೇವೆಗಳಿಗೂ ಕಡ್ಡಾಯವಾಗಿ ರಸೀದಿ ನೀಡಲಾಗುತ್ತದೆಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಮಾಹಿತಿಯನ್ನು ನಂಬದಂತೆ ಆಡಳಿತ ಮಂಡಳಿ ಕೇಳಿಕೊಂಡಿದೆ.