-->
1000938341
ಸಿಇಟಿ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಸಿಇಟಿ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಸಿಇಟಿ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ
ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದು, ಸಂಸ್ಥೆಗೆ ಮತ್ತು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶ್ಲಾಘಿಸಿದ್ದಾರೆ.


ಮೂಡಬಿದಿರೆಯಲ್ಲಿ ಮಾತನಾಡಿದ ಅವರು, ಮೊದಲ 10 Rankನಲ್ಲಿ ಆಳ್ವಾಸ್ ಎರಡು ಸ್ಥಾನ ಗಳಿಸಿರುತ್ತಾರೆ. ಅದೇ ರೀತಿ, ಮೊದಲ 50 Rankನಲ್ಲಿ 9 ಸ್ಥಾನ ಆಳ್ವಾಸ್ ವಿದ್ಯಾರ್ಥಿಗಳು ಗಳಿಸಿದ್ದಾರೆ.


ಮೊದಲ 100 Rankನಲ್ಲಿ 21 ಸ್ಥಾನ ಆಳ್ವಾಸ್ ವಿದ್ಯಾರ್ಥಿಗಳು ಗಳಿಸಿದ್ದಾರೆ. ಮೊದಲ 200 Rankನಲ್ಲಿ 48 ಸ್ಥಾನಗಳನ್ನು ನಮ್ಮ ವಿದ್ಯಾರ್ಥಿಗಳು ಗಳಿಸಿದ್ದಾರೆ ಎಂದು ಮೋಹನ ಆಳ್ವ ಹೇಳಿಕೊಂಡರು.


ಸಿಇಟಿಯ 500 Rankನಲ್ಲಿ 157 ಸ್ಥಾನ ಆಳ್ವಾಸ್ ವಿದ್ಯಾರ್ಥಿಗಳು ಗಳಿಸಿದ್ದಾರೆ. ಅಷ್ಟೇ ಅಲ್ಲ, ಮೊದಲ 1000 Rankನಲ್ಲಿ 516 ಸ್ಥಾನ ಆಳ್ವಾಸ್ ವಿದ್ಯಾರ್ಥಿಗಳು ಗಳಿಸಿದ್ದಾರೆ. ಮೊದಲ 5000 Rankನಲ್ಲಿ 2656 ಸ್ಥಾನಗಳು ಆಳ್ವಾಸ್ ಸಂಸ್ಥೆಗೆ ದೊರೆತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article