ಮಂಗಳೂರು:ವರಸ್ತೆ ವಿಭಾಜಕಕ್ಕೆ ಸ್ಕೂಟರ್ ಢಿಕ್ಕಿಯಾಗಿ ಯುವಕನೋರ್ವನು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಗರದ ಮೇರಿಹಿಲ್ ಜಂಕ್ಷನ್ ಬಳಿ ನಡೆದಿದೆ.
ಕಾವೂರು ನಿವಾಸಿ ನಿಶಾಂಕ್(23) ಮೃತಪಟ್ಟ ಯುವಕ.
ಗುರುವಾರ ರಾತ್ರಿ 11.30ರ ಸುಮಾರಿಗೆ ನಿಶಾಂಕ್ ಸ್ಕೂಟರ್ ನಲ್ಲಿ ಕೆಪಿಟಿಯಿಂದ ಪದವಿನಂಗಡಿ ಕಡೆಗೆ ಸಂಚರಿಸುತ್ತಿದ್ದರು. ಆದರೆ ಮೇರಿಹಿಲ್ ಜಂಕ್ಷನ್ ನ ನೆಕ್ಸಾ ಶೋರೂಮ್ ಮುಂಭಾಗದ ರಸ್ತೆಗೆ ಬರುತ್ತಿದ್ದಂತೆ ಸ್ಕೂಟರ್ ರಸ್ತೆಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ಬಿದ್ದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ನಿಶಾಂಕ್ ತಲೆ ಹಾಗೂ ಹೊಟ್ಟೆಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ತಕ್ಷಣ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 1.30ರ ವೇಳೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.