-->
1000938341
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಿಜೆಪಿ ಗೆದ್ದರೂ ಮತ ಗಳಿಕೆಯಲ್ಲಿ 1.25 ಲಕ್ಷ ಮತಗಳು ಇಳಿಕೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಿಜೆಪಿ ಗೆದ್ದರೂ ಮತ ಗಳಿಕೆಯಲ್ಲಿ 1.25 ಲಕ್ಷ ಮತಗಳು ಇಳಿಕೆ


ಮಂಗಳೂರು: ಬಿಜೆಪಿಯ ಭದ್ರಕೋಟೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಪಾರಮ್ಯ ಮೆರೆದಿದೆ. ಆದರೆ ಕಳೆದ ಲೋಕಸಭೆ ಚುನಾವಣೆಗಿಂತ ಮತಬೇಟೆಯಲ್ಲಿ ಇಳಿಕೆ ಕಂಡಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 33 ವರ್ಷಗಳಿಂದಲೂ ವಿಜಯಯಾತ್ರೆ ಮುಂದುವರೆಸಿದೆ. 1991 ರಲ್ಲಿ ಧನಂಜಯಕುಮಾರ್ ಬಿಜೆಪಿಯಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಳಿಕದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡದ್ದೇ ಇಲ್ಲ. 2024ರ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ 1,49,208 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ ಕಟೀಲು ಅವರು 2.75 ಲಕ್ಷ ಮತಗಳ ಅಂತರದಿಂದ ಗೆಲುವು ಕಾಂಗ್ರೆಸ್ ಎದುರು ಗೆದ್ದು ಬೀಗಿದ್ದರು. ಆದರೆ ಈ ಬಾರಿ ಕಳೆದ ಬಾರಿಗಿಂತ ಮತಗಳ ಅಂತರ ಕಡಿಮೆಯಾಗಿದೆ. ಆದರೆ ಲಕ್ಷ ಮತಗಳ ಅಂತರದಿಂದ ಜಯ ದೊರಕಿದೆ. 

ಕಾಂಗ್ರೆಸ್ ನಿಂದ ದ‌.ಕ.ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪದ್ಮರಾಜ್ ಆರ್ ಪೂಜಾರಿಯವರು ಕಣದಲ್ಲಿದ್ದದ್ದು ಈ ಅಂತರಕ್ಕೆ ಕಾರಣ. ಪದ್ಮರಾಜ್ ಅಲ್ಲದೆ ಬೇರೆ ಅಭ್ಯರ್ಥಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯ ಮತ ಗಳಿಕೆ ಇನ್ನೂ ಹೆಚ್ಚುತ್ತಿತ್ತು. ಪದ್ಮರಾಜ್ ಅವರ ವೈಯುಕ್ತಿಕ ಮತಗಳು ಬ್ರಿಜೇಶ್ ಚೌಟ ಅವರ ಮತಬೇಟೆಯ ನಾಗಲೋಟಕ್ಕೆ ಕೊಂಚ ಕಡಿವಾಣ ಹಾಕಿತ್ತು. 


Ads on article

Advertise in articles 1

advertising articles 2

Advertise under the article