-->
ಮಂಗಳೂರು: ಕುಟುಂಬದ ದೈವದ ಹರಕೆ ನೇಮ ತೀರಿಸಿದ ಕೆಜಿಎಫ್ ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ - Video

ಮಂಗಳೂರು: ಕುಟುಂಬದ ದೈವದ ಹರಕೆ ನೇಮ ತೀರಿಸಿದ ಕೆಜಿಎಫ್ ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ - Video


ಮಂಗಳೂರು: ಕೆಜಿಎಫ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಶ್ರೀನಿಧಿ ಶೆಟ್ಟಿ ನಗರದ ಹೊರವಲಯದ ಕಿನ್ನಿಗೋಳಿಯಲ್ಲಿರುವ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ದೈವದ ನೇಮದಲ್ಲಿ ಪಾಲ್ಗೊಂಡು ಹರಕೆ ತೀರಿಸಿಕೊಂಡರು.

ಶ್ರೀನಿಧಿ ಶೆಟ್ಟಿಯವರು ಈ ಹಿಂದೆ ತಮ್ಮ ಇಷ್ಟಾರ್ಥ ಸಿದ್ಧಿಯಾಗಲು ಕುಟುಂಬದ ದೈವಗಳಿಗೆ ನೇಮ ಸಲ್ಲಿಸುತ್ತೇನೆಂದು ಹರಕೆ ಹೇಳಿದ್ದರು. ಅದರಂತೆ ಅವರು ಇದೀಗ ಕುಟುಂಬದ ಮನೆ ತಾಳಿಪಾಡಿಗುತ್ತುವಿಗೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಜಾರಂದಾಯ ಮತ್ತು ಬಂಟ ಹಾಗೂ ಪರಿವಾರ ದೈವಗಳಿಗೆ ನೇಮ ನೀಡಿ ಹರಕೆ ತೀರಿಸಿದ್ದಾರೆ. ತಮ್ಮ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದವಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಸಲ್ಲಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿ ಎಂದು ನೇಮದ ವೇಳೆ ದೈವಗಳು ಶ್ರೀನಿಧಿ‌ ಶೆಟ್ಟಿಗೆ ಅಭಯ ನೀಡಿದೆ.

Ads on article

Advertise in articles 1

advertising articles 2

Advertise under the article