ಕಪಿಲ್ ಶರ್ಮಾ ಶೋನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ: ಕಾಮುಕ ಅರೆಸ್ಟ್
Sunday, May 26, 2024
ಮುಂಬೈ: ಹಾಸ್ಯನಟ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಅವಕಾಶ ಕೊಡಿಸುವ ನಂಬಿಸಿ ಹುಟ್ಟಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ 26 ವರ್ಷದ ಯುವತಿಗೆ ಅತ್ಯಾಚಾರಿ ಆನಂದ್ ಸಿಂಗ್ ಎಂಬ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದಾನೆ. ಟಿವಿ ಉದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ತನಗೆ ಸಂಪರ್ಕವಿದೆ. ಪ್ರತಿಷ್ಠಿತ ಕಪಿಲ್ ಶರ್ಮಾ ಶೋನಲ್ಲಿ ಕೆಲಸ ಕೊಡಿದುವುದಾಗಿ ಯುವತಿಯನ್ನು ನಂಬಿಸಿದ್ದಾನೆ. ಅಲ್ಲದೆ ಮೇ 20 ರಂದು ಆಡಿಷನ್‌ಗೆಂದು ಯುವತಿಯನ್ನು ಮನೆಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಆರೋಪಿ ಆನಂದ್ ಸಿಂಗ್ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಂತ್ರಸ್ತೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದರ ಹೊರತಾಗಿಯೂ, ಸಂತ್ರಸ್ತೆ ಆರೋಪಿಯ ವಿರುದ್ಧ ನಲಸೋಪಾರಾದ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಕಾಸ್ಟಿಂಗ್ ಏಜೆಂಟ್ ಆನಂದ್ ಸಿಂಗ್ ವಿರುದ್ಧ ಭಾರತೀಯ ಐಪಿಸಿ ಸೆಕ್ಷನ್ 376, 323, 504, ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಆನಂದ್ ಸಿಂಗ್ ನನ್ನು ಬಂಧಿಸಿದ್ದಾರೆ.