ನೈರುತ್ಯ ಪದವೀಧರ ಕ್ಷೇತ್ರ : ಬಿ ಮಹಮ್ಮದ್ ತುಂಬೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

 ಮೈಸೂರು : ಮೇ,15: ನಿವೃತ್ತ ಪ್ರೌಢಶಾಲಾ ಶಿಕ್ಷಕ , ಸಾಮಾಜಿಕ ಕಾರ್ಯಕರ್ತ      ಬಿ.ಮೊಹಮ್ಮದ್ ತುಂಬೆ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಪ್ರಾದೇಶಿಕ ಆಯುಕ್ತರ ಕಚೇರಿ ಮೈಸೂರು ಇಲ್ಲಿ  ನಾಮಪತ್ರ ಸಲ್ಲಿಸಿದರು.


       ಇವರು ಕಳೆದ 40 ವರ್ಷಕ್ಕಿಂತ ಹೆಚ್ಚು ಕಾಲ ಸ್ಕೌಟಿಂಗ್ ನಲ್ಲಿ ಸ್ಕೌಟ್ ಮಾಸ್ಟರ್ ಆಗಿ ಜಿಲ್ಲಾ ಸಂಸ್ಥೆಯಲ್ಲಿ ಜಿಲ್ಲಾ ಸಂಘಟನಾ ಆಯುಕ್ತರಾಗಿ, ಜಿಲ್ಲಾ ತರಬೇತಿ ಆಯುಕ್ತರಾಗಿ ಹಾಗೂ ಬಂಟ್ವಾಳ ಸ್ಥಳೀಯ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಸ್ಕೌಟ್ಸ್ ವಿಭಾಗದಲ್ಲಿ ಎಲ್ ಟಿ ತರಬೇತಿ, ಕ್ಲಬ್ ವಿಭಾಗದಲ್ಲಿ ಎಚ್ ಡಬ್ಲ್ಯೂ ತರಬೇತಿಯನ್ನು ಪಡೆದು, ಸ್ಥಳೀಯ,ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ನಿಸ್ಸಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ.ಅಲ್ಲದೇ ಜಿಲ್ಲೆಯ ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ.