-->
1000938341
ಹಾಲು ಉಕ್ಕಿ ಗ್ಯಾಸ್ ಮೇಲೆ ಚೆಲ್ಲದಂತೆ ಮಾಡಲು ಇಲ್ಲಿದೆ ಒಳ್ಳೆಯ ಉಪಾಯ

ಹಾಲು ಉಕ್ಕಿ ಗ್ಯಾಸ್ ಮೇಲೆ ಚೆಲ್ಲದಂತೆ ಮಾಡಲು ಇಲ್ಲಿದೆ ಒಳ್ಳೆಯ ಉಪಾಯ


ಮಹಿಳೆಯರಿಗೆ ಅಡುಗೆ ಮನೆಯೇ ಪ್ರಪಂಚ ಆಗಿರುತ್ತದೆ ಮಾಡುವ ಒಂದೊಂದು ತಪ್ಪು ಮತ್ತೊಂದು ಕೆಲಸವನ್ನೂ ನೀಡುತ್ತದೆ .
ಗ್ಯಾಸ್ ಮೇಲೆ ಹಾಲು ಇಟ್ಟು ಮರೆತು ಬಿಟ್ಟರೆ ಉಕ್ಕಿ ಹೋಗಿ ಗ್ಯಾಸ್ ಮೇಲೆ ಬಿದ್ದು ಗ್ಯಾಸ್ ಕ್ಲೀನ್ ಮಾಡೋದುವುದೆ ಒಂದು ಕೆಲಸ ಆಗುತ್ತೆ
ಗ್ಯಾಸ್  ಶುಚಿ  ಮಾಡುವುದು ಅಷ್ಟು ಸುಲಭವಲ್ಲ.
ಹಾಲು ಕುದಿಸುವಾಗ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಉತ್ತಮ
*ಹಾಲು ಕಾಯಿಸಲು ಬಳಸುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ, ಆ ಬಳಿಕ ಹಾಲನ್ನು ಹಾಕಿ ಬಿಸಿ ಮಾಡಿದರೆ ಹಾಲು ಉಕ್ಕಿ ಬರುವುದಿಲ್ಲ. *ಹಾಲು ಕುದಿಸುವ ಪಾತ್ರೆಯು ಸ್ವಲ್ಪ ದೊಡ್ಡದಾಗಿರಲಿ.
*ಹಾಲು ಕುದಿಸುವ ಪಾತ್ರೆಯ ಸುತ್ತಲೂ ಬೆಣ್ಣೆಯನ್ನು ಹಚ್ಚಿ, ಹಾಲು ಕುದಿಸಿದರೆ ಉಕ್ಕಿ ಹೊರಗೆ ಚೆಲ್ಲುವುದಿಲ್ಲ.
*ಸಾಮಾನ್ಯವಾಗಿ ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ನೊರೆ ಬರುತ್ತದೆ. ಈ ವೇಳೆಯಲ್ಲಿ ಸ್ವಲ್ಪ ನೀರನ್ನು ಚಿಮುಕಿಸಿದರೆ ಹಾಲು ಉಕ್ಕುವುದು ನಿಲ್ಲುತ್ತದೆ.
*ಹಾಲು ಕುದಿಸುವಾಗ ಪಾತ್ರೆಯ ಮಧ್ಯದಲ್ಲಿ ಒಂದು ಮರದ ಚಮಚವನ್ನು ಇರಿಸಿದರೆ ಹಾಲು ಉಕ್ಕಿ ಬರುವುದಿಲ್ಲ.
* ಹಾಲು ಉಕ್ಕುತ್ತಿದೆ ಎಂದ ತಕ್ಷಣವೇ ಪಾತ್ರೆಯನ್ನು ಮೇಲೆತ್ತಿ ಅಲುಗಾಡಿಸಿ ನಂತರ ಕುದಿಯಲು ಇಟ್ಟರೆ ಹಾಲು ಉಕ್ಕುವುದನ್ನು ತಕ್ಷಣವೇ ನಿಲ್ಲಿಸಬಹುದು.
ಹೀಗೆ ಹಲವು ಉಪಾಯವನ್ನು ಪ್ರಯೋಗಿಸಿ ಹಾಲು ಉಕ್ಕುವುದನ್ನು ತಡೆಯಿರಿ 

Ads on article

Advertise in articles 1

advertising articles 2

Advertise under the article