ಈ ವಸ್ತುಗಳನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದು ಖಚಿತ...! l
Tuesday, May 28, 2024
ಬಂಗಾರ: ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನೀವು ಸಾಮಾನ್ಯವಾಗಿ ಲಕ್ಷ್ಮಿ ದೇವಿಯ ಕೆಲ ಪೋಟೋಗಳಲ್ಲಿ ಚಿನ್ನದ ನಾಣ್ಯಗಳಿರುವ ಮಡಕೆ ನೋಡಿರುತ್ತೀರಿ. ಈ ಬಂಗಾರ ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವಾಗಿದೆ. ಇದನ್ನ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಅಥವಾ ಸರಿಯಾದ ರೀತಿಯಲ್ಲಿ ಗೌರವಯುತವಾಗಿ ಇಟ್ಟುಕೊಳ್ಳುವುದರಿಂದ ನಮ್ಮ ಸಂಪತ್ತು ಹೆಚ್ಚಾಗುತ್ತದೆ.
ಆನೆಗಳು: ಆನೆಗಳು ಲಕ್ಷ್ಮಿ ದೇವಿಯ ಮತ್ತೊಂದು ಬಹಳ ಮುಖ್ಯವಾದ ಸಂಕೇತವಾಗಿದೆ. ನಾವು ನೋಡಿರುವ ಅನೇಕ ಫೋಟೋಗಳನ್ನ ಗಮನಿಸಿ, ತಾಯಿ ಬಿಳಿ ಆನೆಗಳ ಮೇಲೆ ಸವಾರಿ ಮಾಡುತ್ತಿರುತ್ತಾಳೆ. ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿಗೆ ಆನೇಕ ಕನಕಾಭಿಷೇಕವನ್ನು ಮಾಡುತ್ತವೆ ಎನ್ನಲಾಗುತ್ತದೆ.
ಕಮಲದ ಹೂವು: ಕಮಲದ ಹೂವು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಲಕ್ಷ್ಮಿ ದೇವಿಯು ಕಮಲದ ಎಲೆಯ ಮೇಲೆ ಕುಳಿತಿರುವುದನ್ನ ಎಲ್ಲರೂ ಗಮನಿಸಿರುತ್ತೇವೆ.
ಸ್ವಸ್ತಿಕ್: ನಮ್ಮ ಸಂಪ್ರದಾಯದಲ್ಲಿ ಸ್ವಸ್ತಿಕ ಚಿಹ್ನೆಗೆ ಬಹಳ ಪ್ರಾಮುಖ್ಯತೆ ಇದೆ. ಲಕ್ಷ್ಮಿ ಪೂಜೆ ಮಾಡುವಾಗ ಮಾತ್ರವಲ್ಲದೇ ಅನೇಕ ವಿಶೇಷ ಪೂಜೆಗಳನ್ನ ಮಾಡುವಾಗ ಸ್ವಸ್ತಿಕ ಚಿಹ್ನೆಯನ್ನ ಹಾಕುತ್ತವೆ. ಇದನ್ನ ಲಕ್ಷ್ಮಿ ದೇವಿಯ ಪ್ರತಿನಿಧಿ ಎಂದು ಸಹ ಕರೆಯಲಾಗುತ್ತದೆ. ಅಲ್ಲದೇ, ಇದನ್ನ ಮನೆಯ ಗೋಡೆಗಳ ಮೇಲೆ ಮತ್ತು ಪೂಜಾ ಪೀಠದ ಮೇಲೆ ಬರೆಯುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಸಂಪತ್ತು ಸಹ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
ಗೂಬೆ: ಸಾಮಾನ್ಯವಾಗಿ ಗೂಬೆ ಎಂದರೆ ಎಲ್ಲರಿಗೂ ಭಯ. ಅದು ಅಪಶಕುನದ ಸಂಕೇತ ಎಂದೆಲ್ಲಾ ಕರೆಯಲಾಗುತ್ತದೆ. ಆದರೆ ನಿಮಗೆ ಗೊತ್ತಾ ಲಕ್ಷ್ಮಿ ದೇವಿಯ ಆಶಿರ್ವಾದ ಪಡೆಯಲು ಗೂಬೆ ಬಹಳ ಸಹಾಯ ಮಾಡುತ್ತದೆ. ಹಿಂದೂ ಪುರಾಣಗಳಲ್ಲಿ ಗೂಬೆಗೆ ಹೆಚ್ಚಿನ ಗೌರವವನ್ನು ನೀಡಲಾಗುತ್ತದೆ. ಇದು ಲಕ್ಷ್ಮಿ ದೇವಿಯ ವಾಹನ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ತಾಯಿಯ ಕೃಪೆ ಬೇಕು ಎಂದರೆ ಗೂಬೆಗಳಿಗೆ ಎಂದಿಗೂ ಹಾನಿ ಮಾಡಬಾರದು,