ಮತಗಟ್ಟೆಯಲ್ಲಿ ಮತಯಂತ್ರಕ್ಕೇ ಬೆಂಕಿಕೊಟ್ಟ ಮತದಾರ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ...!
Tuesday, May 7, 2024
ಮುಂಬೈ: ಮತಗಟ್ಟೆಗೆ ಮತಯಂತ್ರ ತರುವುದಕ್ಕೆ ತಡವಾಯ್ತೆಂದು ಆಕ್ರೋಶಗೊಂಡ ಮತದಾರನೊಬ್ಬ ಪೆಟ್ರೋಲ್ ಸುರಿದು ಇವಿಎಂ ಮೆಶಿನ್ ಗೆ ಬೆಂಕಿ ಹಚ್ಚಿರುವ ಘಟನೆ ಸೊಲ್ಲಾಪುರ ಜಿಲ್ಲೆಯ ಮಾದ ಲೋಕಸಭಾ ಕ್ಷೇತ್ರದ ಸಂಗೋಳ ತಾಲ್ಲೂಕಿನ ಬಾದಲವಾಡಿಯಲ್ಲಿ ನಡೆದಿದೆ.
ಆಕ್ರೋಶಿತ ಮತದಾರನೊಬ್ಬ ಇವಿಎಂ ಯಂತ್ರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದು, ಘಟನೆಯಿಂದ ಮತದಾನ ಪ್ರಕ್ರಿಯೆ ಕೆಲ ಸಮಯ ಸ್ಥಗಿತಗೊಳಿಸಲಾಗಿತ್ತು. ಹೊಸ ಇವಿಎಂ ಯಂತ್ರ ಬಂದ ಬಳಿಕ ಮತದಾನ ಪ್ರಕ್ರಿಯೆ ಮುಂದುವರೆಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮತಗಟ್ಟೆಯಲ್ಲಿ ಬೆಂಕಿ ಉಂಟಾಗಿದ್ದನ್ನು ತಿಳಿದು ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ವೇಳೆ, ಮತಗಟ್ಟೆ ಸಿಬ್ಬಂದಿ ನೀರನ್ನು ಬಳಸಿ ಇವಿಎಂನಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಘಟನೆಯಿಂದಾಗಿ ಹೊಸ ಯಂತ್ರ ತರುವ ವರೆಗೆ ಕೆಲಕಾಲ ಮತದಾನ ಸ್ಥಗಿತಗೊಳಿಸಬೇಕಾಯಿತು. ಸಂಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.