ವೃಷಭ ರಾಶಿಯಲ್ಲಿ ಸೂರ್ಯ -ಶುಕ್ರ ಸಂಯೋಗ..! ಈ ರಾಶಿಯವರಿಗೆ ತುಂಬಾನೇ ಅದೃಷ್ಟ..!


ವೃಷಭ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಆರಂಭವಾಗಲಿದೆ.


ವೃಷಭ ರಾಶಿ

 ರಾಶಿಚಕ್ರ ಚಿಹ್ನೆಯಲ್ಲಿ ನಿರ್ಮಾಣವಾಗುತ್ತಿರುವ ಶುಕ್ರಾದಿತ್ಯ ಯೋಗವು ವೃಷಭ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಬಂಪರ್ ಲಾಭವನ್ನು ನೀಡಲಿದೆ. ವೃತ್ತಿಯಲ್ಲಿ ಪ್ರಗತಿ, ಕುಟುಂಬದಲ್ಲಿ ಸಂತೋಷದ ವಾತಾವಾರಣ ನಿರ್ಮಾಣವಾಗಲಿದೆ. 


ಮಿಥುನ ರಾಶಿ
ಶುಕ್ರಾದಿತ್ಯ ರಾಜಯೋಗವು ಮಿಥುನ ರಾಶಿಯವರ ಜೀವನದಲ್ಲಿಯೂ ಒಳ್ಳೆಯ ಫಲಗಳನ್ನು ತರಲಿದೆ. ಈ ಸಮಯದಲ್ಲಿ ವ್ಯಾಪಾರದಿಂದ ಲಾಭ, ವ್ಯವಹಾರವನ್ನು ವಿಸ್ತರಿಸಲು ಒಳ್ಳೆಯ ಸಮಯ. ನಿಮ್ಮ ಬಹುದಿನದ ಆಸೆಗಳು ಕೈಗೂಡುವ ಸಮಯ ಎಂದು ಹೇಳಬಹುದು. 


ಸಿಂಹ ರಾಶಿ 
ಶುಕ್ರಾದಿತ್ಯ ರಾಜಯೋಗವು ಸಿಂಹ ರಾಶಿಯ ಜನರಿಗೂ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದ್ಲಲಿ ಆದಾಯ ಹೆಚ್ಚಳ, ಹೂಡಿಕೆಯಿಂದ ಲಾಭವನ್ನು ಕಾಣಬಹುದು. ಮಕ್ಕಳಿಂದ ಶುಭವಾರ್ತೆ ನಿರೀಕ್ಷಿಸಬಹುದು.