-->
ಮಂಗಳೂರು ವಿಮಾನ ನಿಲ್ದಾಣ ಇನ್ನು "ಸೈಲೆಂಟ್" - ಇಲ್ಲಿದೆ ಕಾರಣ

ಮಂಗಳೂರು ವಿಮಾನ ನಿಲ್ದಾಣ ಇನ್ನು "ಸೈಲೆಂಟ್" - ಇಲ್ಲಿದೆ ಕಾರಣ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ ಪ್ರಯಾಣಿಕರ ಮಾಹಿತಿಗಾಗಿ ಲೌಡ್ ಸ್ಪೀಕರ್‌ಗಳಲ್ಲಿ ಹೊರಡಿಸಲಾಗುತ್ತಿದ್ದ ಘೋಷಣೆಗಳನ್ನು ನಿಲ್ಲಿಸಲು  ವಿಮಾನ ನಿಲ್ದಾಣ ಆಡಳಿತ ಮಂಡಳಿ ನಿರ್ಧರಿಸಿದೆ. 

ಲೌಡ್ ಸ್ಪೀಕರ್ ಘೋಷಣೆಯಿಂದ ಪ್ರಯಾಣಿಕರಿಗೆ  ಕಿರಿಕಿರಿ ಯಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಈ ಕ್ರಮಕ್ಕೆ ಮುಂದಾಗಿದೆ.

ಇನ್ನುಮುಂದೆ ವಿಮಾನ ಆಗಮನ, ನಿರ್ಗಮನ, ವಿಳಂಬ ಸಹಿತ ವಿವಿಧ ಮಾಹಿತಿಯನ್ನು ಪ್ರಯಾಣಿಕರಿಗೆ ಏರ್ ಪೋರ್ಟ್‌ನಲ್ಲಿರುವ ಡಿಸ್‌ಪ್ಲೆ (ಫೈಟ್ ಇನ್ನಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ) ಮೂಲಕ ಪಡೆಯಬಹುದಾಗಿದೆ. ವಿಮಾನ ನಿಲ್ದಾಣದ ಒಳಭಾಗ ಮತ್ತು ಹೊರಭಾಗಗಳಲ್ಲಿ ದೊಡ್ಡ ಡಿಸ್ ಪ್ಲೇಯನ್ನು ಇರಿಸಲಾಗಿದೆ.

ನಿಲ್ದಾಣದ ಟರ್ಮಿನಲ್‌ನಲ್ಲಿ 'ಮೇ ಐ ಹೆಲ್ಸ್ ಯು' ಡೆಸ್ಕ್ ಅನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಸಿಬಂದಿ, ಕಾರ್ಯನಿರ್ವಾಹಕರು ಸಹಾಯಕ್ಕೆ ಇರಲಿದ್ದಾರೆ. ಎಲ್ಲ ಏರ್‌ಲೈನ್ಸ್ ಚೆಕ್- ಇನ್‌ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿಯೂ ವಿಮಾನದ ಮಾಹಿತಿ ಪಡೆಯಲು ಸಾಧ್ಯವಿದೆ.

ತಡೆರಹಿತ ಪ್ರಯಾಣದ ಮಾಹಿತಿಗೆ ಸಹಾಯ, ಬೋರ್ಡಿಂಗ್, ಗೇಟ್ ಬದಲಾವಣೆ, ವಿಮಾನದ ಮರು ವೇಳಾಪಟ್ಟಿ ಮುಂತಾದ ವಿಷಯಗಳು ಏರ್‌ಲೈನ್‌ನಿಂದ ಪ್ರಯಾಣಿಕರ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ಇ-ಮೈಲ್‌ಗೆ ಸಂದೇಶ ಬರಲಿದೆ.

ಹೆಚ್ಚಿನ ಮಾಹಿತಿಗೆ ಟರ್ಮಿನಲ್ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ವಿಮಾನಯಾನ ಸಂಸ್ಥೆಗೂ ಕರೆ ಮಾಡಬಹುದಾಗಿದೆ ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article