-->
1000938341
ಯೂಸರ್‌ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ. ವಂಚನೆ- ವಾಟ್ಸಾಪ್ ಲಿಂಕ್‌ಗೆ ಕ್ಲಿಕ್ ನಲ್ಲಿ 1.75 ಲಕ್ಷ ರೂ. ಮೋಸ

ಯೂಸರ್‌ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ. ವಂಚನೆ- ವಾಟ್ಸಾಪ್ ಲಿಂಕ್‌ಗೆ ಕ್ಲಿಕ್ ನಲ್ಲಿ 1.75 ಲಕ್ಷ ರೂ. ಮೋಸ

 ಉಡುಪಿ: ಯೂಸರ್ ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ ಹಾಗೂ ವಾಟ್ಸಾಪ್ ಲಿಂಕ್ ಮಾಡಿ 1.75 ಲಕ್ಷ ವಂಚನೆ ಆದ ಬಗ್ಗೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ

ಕಾರ್ಕಳ: ಕಂಪೆನಿಯ ಯೂಸರ್ ನೇಮ್ ಹ್ಯಾಕ್ ಮಾಡಿ ಇಂಡಿಯನ್ ಆರ್ಮಿಯ ವೆಬ್ಸೈಟ್ನಲ್ಲಿ ಬಿಡ್ ಮಾಡುವ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕೆದಿಂಜೆ ಗ್ರಾಮದ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲಕ ರಾಹುಲ್ ಎಂಬವರು ಇಂಡಿಯನ್ ಆರ್ಮಿಗೆ ಬಾದಾಮಿ ಪೂರೈಕೆ ಮಾಡುವ ಬಗ್ಗೆ ಭಾರತ ಸರಕಾರದ ಮಾನ್ಯತೆ ಪಡೆದ gem.gov.in ವೆಬ್ಸೈಟ್ನಲ್ಲಿ ಬಹಿರಂಗ ಹರಾಜಿನಲ್ಲಿ .30ರಂದು 5,12,500 ರೂ. ಹಣಕ್ಕೆ ಬಿಡ್ ಮಾಡಿದ್ದರು.

 

ಅಪರಿಚಿತರು ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಯೂಸರ್ ನೇಮ್ ಹ್ಯಾಕ್ ಮಾಡಿ ಕಂಪನಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡು, ಕಂಪನಿಯ ಹೆಸರಿನಲ್ಲಿ ಒಟ್ಟು 21,14,731 ರೂ.ಗೆ ಇಂಡಿಯನ್ ಆರ್ಮಿಯ ವೆಬ್ಸೈಟ್ನಲ್ಲಿ ಬಿಡ್ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

 

ವಾಟ್ಸಾಪ್ ಲಿಂಕ್ಗೆ ಕ್ಲಿಕ್: 1.75 ಲಕ್ಷ ರೂ. ಮೋಸ

ಉಡುಪಿ: ವಾಟ್ಸಾಪ್ಗೆ ಬಂದ ಲಿಂಕ್ಗೆ ಕ್ಲಿಕ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್ ಖಾತೆಯಿಂದ 1.75 ಲಕ್ಷ ರೂ. ಹಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ.

 

ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ. ಎಂಬವರು ಮೇ 3ರಂದು ವಾಟ್ಸಾಪ್ ಗ್ರೂಪ್ಗೆ ಅನಾಮ ಧೇಯ ನಂಬರ್ ನಿಂದ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದು, ಕೂಡಲೇ ಅವರ ಮೂರು ಖಾತೆಗಳಲ್ಲಿದ್ದ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ಮೋಸ ಮಾಡಿರುವುದಾಗಿ ದೂರಲಾಗಿದೆ. ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article