-->
1000938341
ತಾಯಿಯ ಎಡಿಟೆಡ್ ಅಶ್ಲೀಲ ಫೋಟೊ ಕಳುಹಿಸಿ ವಿಕೃತಿ:  ನಿನ್ನ ನಗ್ನ ಫೋಟೊ ಸಂಡ್ ಮಾಡು ಎಂದು ಪುತ್ರಿಗೆ ಬೆದರಿಕೆ - ದೂರು ದಾಖಲು

ತಾಯಿಯ ಎಡಿಟೆಡ್ ಅಶ್ಲೀಲ ಫೋಟೊ ಕಳುಹಿಸಿ ವಿಕೃತಿ: ನಿನ್ನ ನಗ್ನ ಫೋಟೊ ಸಂಡ್ ಮಾಡು ಎಂದು ಪುತ್ರಿಗೆ ಬೆದರಿಕೆ - ದೂರು ದಾಖಲು


ಬೆಂಗಳೂರು : ಅಶ್ಲೀಲವಾಗಿ ಎಡಿಟ್ ಮಾಡಿರುವ ತಾಯಿಯ ಫೋಟೋವನ್ನು ಪುತ್ರಿಗೆ ಕಳುಹಿಸಿ ವೈರಲ್ ಮಾಡುವುದಾಗಿ ಬೆದರಿಸಿ ಆಕೆಯ ನಗ್ನ ಫೋಟೋಗಳನ್ನು ಪಡೆಯುತ್ತಿದ್ದ ಆರೋಪದಡಿ ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ 18 ವರ್ಷ ವಯಸ್ಸಿನ ನೊಂದ ಯುವತಿ ನೀಡಿರುವ ದೂರಿನನ್ವಯ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023ರ ಸೆಪ್ಟೆಂಬರ್ ವೇಳೆ ಇನ್‌ಸ್ಟಾಗ್ರಾಂ ಖಾತೆಗೆ ಅಶ್ಲೀಲವಾಗಿ ಎಡಿಟ್ ಮಾಡಲಾಗಿದ್ದ ನನ್ನ ತಾಯಿಯ ಫೊಟೋವನ್ನು ವಂಚಕ ಕಳುಹಿಸಿದ್ದ. ಬಳಿಕ ಬೆದರಿಕೆ ಹಾಕಿ, ತನ್ನ ನಗ್ನ ಫೋಟೋ ಕಳುಹಿಸದಿದ್ದರೆ ತಾಯಿಯ ಫೋಟೋವನ್ನು ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿದ್ದ. ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಅಂಜಿ ನನ್ನ ನಗ್ನ ಫೋಟೋಗಳನ್ನು ವಂಚಕನಿಗೆ ಕಳುಹಿಸಿದ್ದೆ. ಬಳಿಕ ಅದೇ ಫೋಟೋವನ್ನು ಆರೋಪಿ ನನ್ನ ಸ್ನೇಹಿತರಿಗೆ, ಸೋದರ ಮಾವನಿಗೆ ಶೇರ್ ಮಾಡಿದ್ದಾನೆ. ಆರು ತಿಂಗಳುಗಳಿಂದ ಅಪರಿಚಿತ ವಂಚಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ದೂರುದಾರಳ ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ಯುವತಿಯ ಕೆಲ ಪರಿಚಿತರು, ಸ್ನೇಹಿತರ ವಿಚಾರಣೆ ಆರಂಭಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article