-->
1000938341
ಕಾರ್ಮಿಕರನ್ನು ನೆನೆಯುವ ಸುದಿನ, ಕಾರ್ಮಿಕರ ದಿನ ಶುಭಾಶಯಗಳು

ಕಾರ್ಮಿಕರನ್ನು ನೆನೆಯುವ ಸುದಿನ, ಕಾರ್ಮಿಕರ ದಿನ ಶುಭಾಶಯಗಳು

ತಮ್ಮ ಶ್ರಮವನ್ನು ಯಾವುದೇ  ಪ್ರತಿಫಲವಿಲ್ಲದೆ  ಜನರಿಗಾಗಿ ಧಾರೆ ಎರೆಯುವ ಕಾರ್ಮಿಕರ ಶ್ರಮವನ್ನು  ನೆನೆಸುವ ಸಲುವಾಗಿ ಮೇ ತಿಂಗಳ ಮೊದಲ ದಿನ ಕಾರ್ಮಿಕರ ದಿನವನ್ನು ಆಚರಿಲಾಗುತ್ತಿದೆ.
ಈ ಕಾರ್ಮಿಕರ ದಿನವನ್ನು 1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಮೇ ತಿಂಗಳ ಮೊದಲ ದಿನವನ್ನು ಕಾರ್ಮಿಕರ ದಿನ ಎಂದೂ ಆಚರಿಸಲಾಗುತ್ತದೆ .
ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು ವಾರದ ಯಾವ ದಿನವೇ ಬರಲಿ ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು.  ಹಾಗಾಗಿ ಮೇ 1ರಂದು ಸಾರ್ವಜನಿಕ ರಜಾದಿನವೆಂದು ಆಚರಿಸಲಾಗುತ್ತದೆ..
ಭಾರತ ಸೇರಿಸಿ ಕೆಲಯೊಂದು ದೇಶಗಳಲ್ಲಿ ಮಾತ್ರ ಮೇ ತಿಂಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಈ ದಿನದಂದೂ ಕಾರ್ಮಿಕರದಿನವನ್ನು ಆಚರಿಸುವುದಿಲ್ಲ.
ಏನೇ ಇರಲಿ  ತಮ್ಮ ಶ್ರಮವನ್ನು ನೀಡಿ ಸಾರ್ವಜನಿಕರಿಗೆ ಸಹಾಯ ಮಾಡುವ ಶ್ರಮ ಜೀವಿಗಳನ್ನು ನೆನಪಿಸಿಕೊಳ್ಳುವ ಸುದಿನ ಕಾರ್ಮಿಕರ ದಿನ ವಾಗಿದೆ.
ಕಾರ್ಮಿಕರು ಇಲ್ಲದ ದೇಶವನ್ನು ನೆನಪಿಸಿ ಕೊಳ್ಳುವ ಅಸಾದ್ಯ ಅಂಥಹ ಕಾರ್ಮಿಕರಿಗೆ ಅವಮಾನ ಮಾಡ್ದೆ ಅವರು ಮಾಡೋ ಕೆಲ್ಸಕ್ಕೆ ಗೌರ ನೀಡುವುದೂ ನಮ್ಮೆಲ್ಲ ಕರ್ತವ್ಯ..

Ads on article

Advertise in articles 1

advertising articles 2

Advertise under the article