-->
1000938341
ರಾಮನವಮಿಯ ಬಗ್ಗೆ ನಿಮಗೆಷ್ಟು ಗೊತ್ತು

ರಾಮನವಮಿಯ ಬಗ್ಗೆ ನಿಮಗೆಷ್ಟು ಗೊತ್ತು


ದೇಶದ ಎಲ್ಲಡೆ ರಾಮನವಮಿ ಹಬ್ಬವನ್ನು ಅದ್ದೂರಿಯಾಗಿ  ಆಚರಿಸಲಾಗುತ್ತಿದೆ. ರಾಮನವಮಿ ಹಬ್ಬಕ್ಕೆ  ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ . ಈ ದಿನ ರಾಮ ನವಮಿ ಹಬ್ಬದ ಜೊತೆಗೆ ಚೈತ್ರ ನವರಾತ್ರಿ ಕೊನೆಯ ದಿನ. ವಿಷ್ಣುವು ರಾಮನವಮಿಯಂದು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ.
ರಾಮನವಮಿ ಪೂಜೆಗೆ ಶುಭ ಸಮಯ ಯಾವುದೂ : 
ಪಂಚಾಂಗದ ಪ್ರಕಾರ, ಎ. 17 ರಾಮನವಮಿಯ ದಿನ ಬೆಳಿಗ್ಗೆ 11:40 ರಿಂದ ಮಧ್ಯಾಹ್ನ 1:40 ರ ನಡುವೆ ಅಭಿಜಿತ್ ಮುಹೂರ್ತವಿದೆ. ಈ ಮಧ್ಯೆ ರಾಮ ಜನೋತ್ಸವವನ್ನು ಆಚರಿಸಿ, ಭಗವಾನ್ ರಾಮ ಲಲ್ಲಾನ ಪೂಜೆ ಮಾಡಿ.
ರಾಮ ನವಮಿ ಇತಿಹಾಸ.!
ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು ಆದರೆ ಅವನಿಗೆ ಮಕ್ಕಳಿರಲಿಲ್ಲ ಆದ್ದರಿಂದ ರಾಜ ದಶರಥನು ಮಹಾ ಋಷಿ ವಸಿಷ್ಠರ ಸಲಹೆಯ ಪ್ರಶಸ್ತಿ ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ಮಾಡಿದನು. ಬಳಿಕ ಅವರು ಆಶೀರ್ವದಿಸಿದ ಪಾಯಸವನ್ನು ಅವನ ಹೆಂಡತಿಯರಿಗೆ ಕೊಡಲು ಹೇಳಿದರು. ಬಳಿಕ ದಶರಥನ ಹೆಂಡತಿಯರು 4 ಗಂಡು ಮಕ್ಕಳ
ತಾಯಿಯಾದರು.
ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಇಲ್ಲವೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಅದರಲ್ಲಿ ಮೊದಲನೆಯವನು ರಾಮ. ಕೌಸಲ್ಯಳು ಚೈತ್ರ ಮಾಸದ ಒಂಬತ್ತನೇ ದಿನದಂದು ಭಗವಾನ್ ರಾಮನಿಗೆ ಜನ್ಮ ನೀಡಿದಳು. ಸುಮಿತ್ರಾ ಶತ್ರುಘ್ನ ಮತ್ತು ಲಕ್ಷ್ಮಣನಿಗೆ ಜನ್ಮ ನೀಡಿದಳು, ಕೈಕೇಯಿ ಭರತನಿಗೆ ಜನ್ಮ ನೀಡಿದಳು ಹಾಗಾಗಿ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಹಿಂದೂ ಭಕ್ತರು ಬಹಳ ವೈಭವದಿಂದ ಆಚರಿಸುತ್ತಾರೆ.
ರಾಮ ನವಮಿ ಮಹತ್ವ!
ಈ ಶುಭ ದಿನದಂದು ಶ್ರೀ ರಾಮ ಚಂದ್ರನು ಮನುಷ್ಯ ರೂಪದಲ್ಲಿ ಭೂಮಿಗೆ ಬಂದನು ಜೊತೆಗೆ ರಾಮ ವಿಷ್ಣುವಿನ ಏಳನೇ ಅವತಾರವಾಗಿರುವುದರಿಂದ ರಾಮ ನವಮಿ ಹಿಂದೂಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲೈಯ ಮಗ. ಭಗವಾನ್ ರಾಮನನ್ನು ಆದರ್ಶ ಮಾನವ, ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮುಖ್ಯವಾಗಿ ರಾಮ ಲಲ್ಲಾ ಜನಿಸಿದ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಿಸುವುದಿಲ್ಲ. ಹೆಚ್ಚಿನ ಸಂಖ್ಯೆಯ ಭಕ್ತರು ಆ ಸ್ಥಳಕ್ಕೆ ಭೇಟಿ ನೀಡಿ ಶ್ರೀ ರಾಮನ ದರ್ಶನ ಪಡೆಯುತ್ತಾರೆ.

Ads on article

Advertise in articles 1

advertising articles 2

Advertise under the article