-->

ಬೆಳುಳ್ಳಿಯಲ್ಲಿ ಇರುವ ಆರೋಗ್ಯಕರ ಅಂಶಗಳು ಯಾವುವು

ಬೆಳುಳ್ಳಿಯಲ್ಲಿ ಇರುವ ಆರೋಗ್ಯಕರ ಅಂಶಗಳು ಯಾವುವು


ಬೆಳ್ಳುಳ್ಳಿಯನ್ನು ನಾವು ಹೆಚ್ಚಾಗಿ ದಿನನಿತ್ಯ ಬಳಕೆ ಮಾಡುವ ಕಾರಣ ಇದರ ವಾಸನೆ ಘಾಟು ಎನಿಸಿದರೂ ಮೂಗಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಬೆಳ್ಳುಳ್ಳಿ ಯಲ್ಲಿ ಆರೋಗ್ಯಕರ ಅಂಶಗಳು ಏನು

ನೀವು ಮಲಗುವ ಹಾಸಿಗೆಯು ಜೇಡ, ನೊಣ, ಸೊಳ್ಳೆ ಸೇರಿದಂತೆ ಇತರೆ ಕೀಟಗಳಿಗೂ ವಾಸಸ್ಥಾನವಾಗಿರುತ್ತದೆ ಇದರಿಂದ ದೂರಗಳು  ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಿಂದ ಹೊರ ಬರುವ ವಾಸನೆಗಳು ಕೀಟಗಳನ್ನು ಓಡಿಸುತ್ತದೆ ಹೊಂದಿದೆ.  ಕೀಟಗಳಿಗೆ  ಹೀಗಾಗಿ ಮಲಗುವಾಗ ಬೆಳ್ಳುಳ್ಳಿ ನಿಮ್ಮ ಹತ್ತಿರಕ್ಕೆ ಇಟ್ಟುಕೊಳ್ಳುವುದು ಒಳ್ಳೆಯದು.
ಬೆಳ್ಳುಳ್ಳಿಯ ಸಹಾಯದಿಂದ ನೀವು ನಿಮ್ಮ ಚರ್ಮಕ್ಕೆ ಚುಚ್ಚಿಕೊಂಡಿರುವ ಚಿಕ್ಕದಾದ ಚೂಪಾದ ವಸ್ತುಗಳನ್ನು ತೆಗೆದುಕೊಳ್ಳಬಹುದು . ಒಂದು ಬೆಳ್ಳುಳ್ಳಿಯನ್ನು ಕತ್ತರಿಸಿಕೊಳ್ಳಿ. ನಿಮ್ಮ ಚರ್ಮಕ್ಕೆ ಚೂಪಾದ ವಸ್ತು ಚುಚ್ಚಿಕೊಂಡ ಜಾಗಕ್ಕೆ ಲೇಪಿಸಿ.
ಬಳಿಕ ಬ್ಯಾಂಡೇಜ್ ಸುತ್ತಿಕೊಳ್ಳಿ. ನಿಮಗೆ ಕೊಂಚ ಉರಿದ ಅನುಭವವಾಗಬಹುದು. ಆದರೆ ಕೆಲವು ಸಮಯದ ಬಳಿಕ ಇದು ಚೂಪಾದ ವಸ್ತುವನ್ನು ಚರ್ಮದಿಂದ ಹೊರಬರುವಂತೆ ಮಾಡಿರುತ್ತದೆ.
ಇದರಿಂದ ನೀವು ಸುಲಭವಾಗಿ ಅದನ್ನು ತೆಗೆದು ಹಾಕಲು ಸಾಧ್ಯವಿದೆ.ಕೂದಲಿನ ಆರೈಕೆಯ ವಿಚಾರದಲ್ಲಿಯೂ ಬೆಳ್ಳುಳ್ಳಿ ಉತ್ತಮ ಆಯ್ಕೆಯಾಗಿದೆ. ನಿಮಗೆ ಅತಿಯಾಗಿ ಕೂದಲು ಉದುರುತ್ತಿದ್ದರೆ ನೀವು ಬೆಳ್ಳುಳ್ಳಿ ಬಳಕೆ ಮಾಡಬಹುದು.

ಬೆಳ್ಳುಳ್ಳಿಯಲ್ಲಿರುವ ಕಾಲಜನ್ ಎಂಬ ಪ್ರೊಟೀನ್ ಅಂಶವು ನಿಮ್ಮ ಕೂದಲುಗಳನ್ನು ಬಲಪಡಿಸುತ್ತದೆ. ಹೆಚ್ವೆಚ್ಚು ಕಾಲಜನ್‌ಗಳ ಉತ್ಪಾದನೆಯು ಕೂದಲಿನ ಬೆಳವಣಿಗೆಯನ್ನು ಇನ್ನಷ್ಟು ಉತ್ತೇಜಿಸುತ್ತದೆ. ಅಲ್ಲದೇ ಕೂದಲು ಬಿಳಿಯಾಗುವುದನ್ನು ತಡೆಯುವ ಸಾಮರ್ಥ್ಯ ಕೂಡಾ ಬೆಳ್ಳುಳ್ಳಿಗೆ ಇದೆ. ಆದರೆ ಬೆಳ್ಳುಳ್ಳಿಯನ್ನು ನೇರವಾಗಿ ಕೂದಲಿಗೆ ಹಾಕಬೇಡಿ. ಇದರ ಬದಲಾಗಿ ನೀವು ನಿಮ್ಮ ಆಹಾರದಲ್ಲಿ ಹೆಚ್ಚೆಚ್ಚು ಬೆಳ್ಳುಳ್ಳಿಯನ್ನು ಬಳಕೆ ಮಾಡುವ ಮೂಲಕ ಕೂದಲಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.

ಬೆಳ್ಳುಳ್ಳಿಯು ನೀವು ಸೇವಿಸಿದ ಆಹಾರವು ನಿಮ್ಮ ದೇಹಕ್ಕೆ ವಿಷವಾಗುವುದನ್ನು ತಡೆಯುತ್ತದೆ. ಸರಿಯಾಗಿ ಬೇಯಿಸದ ಅಥವಾ ನೀವು ಸೇವಿಸಿದ ಅಹಾರದಲ್ಲಿ ಸೂಕ್ಷ್ಮಾಣು ಜೀವಿಗಳಿದ್ದರೆ ಆಹಾರ ವಿಷವಾಗಿ ಮಾರ್ಪಾಡುತ್ತದೆ. ಇದನ್ನೇ ನಾವು ಫುಡ್ ಪಾಯ್ಸನಿಂಗ್ ಎಂದು ಕರೆಯುತ್ತೇವೆ. ಆದರೆ ಬೆಳ್ಳುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಗುಣಗಳು ದೇಹದಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವ ಮೂಲಕ ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡುತ್ತದೆ.

ನಿಮಗೆ ನೇರವಾಗಿ ಬೆಳ್ಳುಳ್ಳಿ ಸೇವನೆ ಮಾಡುವುದು ಹಿಂಸೆ ಎನಿಸಿದರೆ ಸೌತೆಕಾಯಿ, ಟೊಮೆಟೊ ಅಥವಾ ನೀವು ಇಷ್ಟಪಡುವ ಯಾವುದೇ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಸೇವಿಸಬಹುದಾಗಿದೆ. ಬೆಳ್ಳುಳ್ಳಿ ಸೇವನೆಯಿಂದ ಬಾಯಿಯಿಂದ ಹೊರ ಸೂಸುವ ವಾಸನೆಗೆ ಏನು ಮಾಡುವುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಸಲಾಡ್ ತಯಾರಿಸುವಾಗ ಸ್ವಲ್ಪ ನಿಂಬೆ ರಸವನ್ನು ಹಿಂಡಿಕೊಳ್ಳಿ. ಬೆಳ್ಳುಳ್ಳಿ ಸೇವನೆ ಬಳಿಕ ಹೆಚ್ಚೆಚ್ಚು ನೀರು ಕುಡಿಯಿರಿ.


Ads on article

Advertise in articles 1

advertising articles 2

Advertise under the article