-->
1000938341
ತೊಂಡೆಕಾಯಿಯಲ್ಲಿ ಇರುವ ಆರೋಗ್ಯಕರ ಅಂಶಗಳು ಯಾವುವು

ತೊಂಡೆಕಾಯಿಯಲ್ಲಿ ಇರುವ ಆರೋಗ್ಯಕರ ಅಂಶಗಳು ಯಾವುವು


ಸಾಮಾನ್ಯವಾಗಿ ತೊಂಡೆಕಾಯಿ  ಪರಿಚಯ ಎಲ್ಲರಿಗೂ ಉಂಟು . ನೈಸರ್ಗಿಕವಾಗಿ ಸಿಗುವಂತ ಈ ತೊಂಡೆಕಾಯಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು  ಕೊಡುತ್ತದೆ  ಎಂದು ಎಲ್ಲರಿಗೂ ಗೊತ್ತಿಲ್ಲ .ತೊಂಡೆಕಾಯಿಯಲ್ಲಿ ಇರುವ ಆರೋಗ್ಯಕರ ಅಂಶಗಳ ಬಗ್ಗೆ ಇಲ್ಲಿದೆ ವಿವರ.
ತೊಂಡೆಕಾಯಿಯಲ್ಲಿ ಇರುವ ವಿಶೇಷತೆ ಏನು.?
ವಿಟಮಿನ್ 'ಸಿ' ಮತ್ತು ಬೀಟಾ ಕೆರೋಟಿನ್ ಅಂಶ ಹೊಂದಿರುವಂತ ತೊಂಡೆಕಾಯಿ ವಿಟಮಿನ್ 'ಬಿ2', 2 '23' ಹೊಂದಿರುತ್ತದೆ
ತೊಂಡೆಕಾಯಿಯಲ್ಲಿ  ಇರುವ ಉಪಯೋಗಗಳೇನು.?
ಪೋಷಕಾಂಶಗಳನ್ನು ಹೊಂದಿರುವಂತ ತೊಂಡೆಕಾಯಿ ಮನುಷ್ಯನ ದೇಹಕ್ಕೆ ಹೆಚ್ಚು ಸಹಕಾರಿಯಾಗಿದೆ. ಹಾಗು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ನೈಸರ್ಗಿಕವಾಗಿ ಸಿಗುವಂತ ಈ ಎಳೆಯ ತೊಂಡೆ ಕಾಯಿಯನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
ತೊಂಡೆಕಾಯಿ ಸೇವನೆಯಿಂದ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ.
ಅಲ್ಲದೆ ಇದು ರಕ್ತವನ್ನು ಶುದ್ದೀಕರಿಸುತ್ತದೆ.
ಕಣ್ಣು ಹುರಿ ನಿವಾರಣೆ:
ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ನೀರಿಗೆ ಬೆರಸಿ ಅದನ್ನು ಒಂದು ಲೋಟ ರಸ ಆಗೋವರೆಗೂ ಕುದಿಸಿ, ತಯಾರಿಸಿದ ಆ ರಸವನ್ನು ದಿನಕ್ಕೆ 2-3 ಬಾರಿ ಸೇವನೆ ಮಾಡಿದ್ರೆ ಪರಿಹಾರ ಕಂಡುಕೊಳ್ಳಬಹುದು.
ಮಲಬದ್ಧತೆಯ ಜೊತೆಗೆ ಮಲ ವಿಸರ್ಜನೆಗೆ ಸಂಬಂದಿಸಿದ ಯಾವುದೇ ಸಮಸ್ಯೆ ಇದ್ರೆ ತೊಂಡೆಕಾಯಿಯಲ್ಲಿರುವ ಬೀಜಗಳು ನಿವಾರಣೆಯನ್ನು ಮಾಡುತ್ತವೆ.

Ads on article

Advertise in articles 1

advertising articles 2

Advertise under the article