-->
1000938341
ಅಸ್ಪಶ್ಯತೆ ಎಂಬ ಬೆಂಕಿಯಲ್ಲಿ ಅರಳಿದ ಗುಲಾಬಿ

ಅಸ್ಪಶ್ಯತೆ ಎಂಬ ಬೆಂಕಿಯಲ್ಲಿ ಅರಳಿದ ಗುಲಾಬಿ


ಅಂಬೇಡ್ಕರ್  ನಮ್ಮ ದೇಶ ಕಂಡ ಅತ್ಯಂತ  ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಇವರು ಮುಂಚೂಣಿಯಲ್ಲಿ ಇರುತ್ತಾರೆ  . ಚಿಕ್ಕ ವಯಸ್ಸಿನಲ್ಲೇ ಅಪಮಾನ, ಚುಚ್ಚು ಮಾತು, ಬೇದ ಭಾವ , ಹೀಗೆ ನಾನಾ ರೀತಿಯ  ಅವಮಾನಗಳನ್ನ ಅನುಭವಿಸಿ  ಆ ಅವಮಾನವನ್ನು  ಸನ್ಮಾನ ಎಂದು ಭಾವಿಸಿ ಇವರು
ರಾಮಜಿ ಸಕ್ಪಾಲ್ ಮತ್ತು ಜೀಜಾಬಾಯಿಯ 14ಜನ ಮಕ್ಕಳಲ್ಲಿ ಕೊನೆಯವರಗಿ 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.ಏನು ತಿಳಿಯದ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಇವರು ಚಿಕ್ಕ ವಯಸ್ಸಿನಲ್ಲೇ ಸಮಾಜ ತೊಡಕುಗಳನ್ನ ವಿರೋದಿಸುತ್ತ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ಸಹ ನಾನು ಅನುಭವಿಸಿದ ಕಷ್ಟ ಯಾರು ಪಡೆಯಬಾರದು ಎಂದು ಹಗಲು ರಾತ್ರಿ ಕಷ್ಟ ಪಟ್ಟು ಓದಿ ಕಾನೂನು ಪದವಿ ಪಡೆದರು ಸ್ವತಂತ್ರ ಭಾರತ  ಮೊದಲ ಕಾನೂನು ಸಚಿವರಾದರು. 
 ನಮ್ಮ ದೇಶದ ಆಧಾರವಾದ ಸಂವಿಧಾನವನ್ನು  ಅಂಬೇಡ್ಕರ್ ಅವರ ಸಾರಥ್ಯದಲ್ಲಿ ರಚಿಸಲಾಯಿತ್ತು ಇದು ನಿಜವಾಗಿಯು  ದಿನರ ಬದುಕಿಗೆ ದಾರಿ ದೀಪವಾಗಿದೆ.
ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಈಗಲೂ ಕೂಡ ಲಕ್ಷಾಂತರ ಶೋಷಿತ ವರ್ಗಕ್ಕೆ   ಆಧಾರ. ವಿಶ್ವವಿಖ್ಯಾತಿ ಪಡೆದ ಅಂಬೇಡ್ಕರ್ ಅವರು ಇಷ್ಟೆಲ್ಲಾ ಸಾಧನೆ ಮಾಡಿದ್ದು ಅವರು   ಪಟ್ಟ ಕಷ್ಟಗಳನ್ನೂ ಇನ್ನೂ ಯಾರು ಪಡಬಾರದು ಎಂದು ಸಂವಿಧಾನದಲ್ಲಿ ಸಮಾನತೆ ಭ್ರಾತೃತ್ವವನ್ನು ಎತ್ತಿ  ಹಿಡಿದಿದ್ದಾರೆ ಇದೇ ಈಗಿನ ದಲಿತರು  ಒಂದು ಮಟ್ಟಿನ ಸಾಧನೆ ಮಾಡಿ ಎಲ್ಲರಲ್ಲಿ ಒಬ್ಬರಾಗಿದ್ದಾರೆ ಎಂದರೆ ಅದಕ್ಕೆ ಮೂಲ ದೀನರ ನಾಯಕ ಅಂಬೇಡ್ಕರ್ ಅವರು ಪಡೆದ ಕಷ್ಟಗಳು ಮತ್ತೆ ಅವರೂ ಮಾಡಿದ ಸಾಧನೆ .
ಇವರ ಸಾಧನೆಗೆ ಮೆರಗು ನೀಡಿದ ಪ್ರಶಸ್ತಿ
 ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರವಾದ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಿ ಗೌರವಿಸಿದ್ದರು 
2015 ವಿಶ್ವರತ್ನ ಪ್ರಶಸ್ತಿ-ಕೊಲಂಬಿಯ ವಿಶ್ವವಿದ್ಯಾನಿಲಯದಿಂದ ಮರಣೋತ್ತರವಾಗಿ ದೊರೆತಿದೆ 
ಹೀಗೆ ನಾನಾ ರೀತಿಯ ಪ್ರಶಸ್ತಿ ದೊರೆತಿದೆ.
ಇವರ ಸಾಧನೆಯ ಬಗ್ಗೆ ಏಷ್ಟು ಹೇಳಿದರು ಮುಗಿಯುವುದಿಲ್ಲ, ಅಂಬೇಡ್ಕರ್ ರವರು ದೀನರ  ಅಸ್ಪೃಶ್ಯರ
ಪಾಲಿಗೆ ದೇವರಾಗಿರುವ  ಮಹಾನ್ ಚೇತನ ಜನಮ ದಿನವಿಂದು
ಎಲ್ಲರಿಗು ಅಂಬೇಡ್ಕರ್ ರವರ 132 ನೇ ಜನ್ಮ ದಿನ ಶುಭಾಶಯಗಳು

Ads on article

Advertise in articles 1

advertising articles 2

Advertise under the article