ಏರ್ ಗನ್ ನಲ್ಲಿ ಆಟ: ಎದೆಗೆ ಗುಂಡು ಸಿಡಿದು ಬಾಲಕ ದುರ್ಮರಣ


ಚಿಕ್ಕಮಗಳೂರು: ಏರ್ ಗನ್ ನಲ್ಲಿ ಆಟವಾಡುತ್ತಿದ್ದ 8ರ ಬಾಲಕನೋರ್ವನು ಟ್ರಿಗರ್ ಒತ್ತಿದ ಪರಿಣಾಮ ಗುಂಡು ಎದೆಗೆ ಸಿಡಿದು ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿ-ಪಿಕ್ಕಿ ತಾಂಡಾದಲ್ಲಿ ನಡೆದಿದೆ.

ವಿಷ್ಣು ರಾಜ್ (8) ಮೃತಪಟ್ಟ ಬಾಲಕ. 

ವಿಷ್ಣು ರಾಜ್ ಏರ್ ಗನ್ ನಲ್ಲಿ‌ ಆಟವಾಡಿಕೊಂಡಿದ್ದ. ಈ ವೇಳೆ ಆತ ಟ್ರಿಗರ್ ಒತ್ತಿದ್ದಾನೆ ಪರಿಣಾಮ ಮಿಸ್ ಫೈರ್ ಆಗಿದ್ದು, ಬಾಲಕನ ಎದೆಗೆ ಗುಂಡು ಸಿಡಿದಿದೆ. ಇದರಿಂದ ಬಾಲಕ ದುರ್ಮರಣಕ್ಕೀಡಾಗಿದ್ದಾನೆ. ಸದ್ಯ ವಿಷ್ಣು ರಾಜ್ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದೇಹ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.

ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu