200 ಕೋಟಿ ರೂ. ದಾನ ಮಾಡಿ ಸಂನ್ಯಾಸತ್ವ ಸ್ವೀಕರಿಸಿದ ದಂಪತಿ


ಗುಜರಾತ್: ಕೋಟಿ ಕೋಟಿ ರೂಪಾಯಿ ಒಡೆಯರಾಗಿದ್ದ ಗುಜರಾತ್‌ನ ಜೈನ ದಂಪತಿ ಮೋಕ್ಷದ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಇವರು ತಮ್ಮ 200 ಕೋಟಿ ರೂ. ಆಸ್ತಿಯನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಸಮಾರಂಭವೊಂದರಲ್ಲಿ ಭಾವೇಶ್ ಭಂಡಾರಿ ಎಂಬ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಸಂಪೂರ್ಣ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದರು. ಇದೇ ತಿಂಗಳ ಕೊನೆಯ ವಾರದಲ್ಲಿ ಅಧಿಕೃತವಾಗಿ ಅವರು ದೀಕ್ಷೆ ಸ್ವೀಕರಿಸಲಿದ್ದಾರೆ.

ಭಾವೇಶ್ ಭಂಡಾರಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಿಂಚಿದ್ದಾರೆ. ಅವರ ಕುಟುಂಬ ಹಿಮ್ಮತ್‌ ನಗರದಲ್ಲಿ ನೆಲೆಸಿದೆ. 2022 ರಲ್ಲಿ, ಭವೇಶ್‌ ಅವರ ಪುತ್ರಿ (19) ಮತ್ತು ಮಗ (16) ಸಹ ಸನ್ಯಾಸ ಪಡೆದಿದ್ದರು. ಇದೇ 22ರಂದು ಸನ್ಯಾಸ ಸ್ವೀಕರಿಸಿದ ಬಳಿಕ ಚಪ್ಪಲಿಯನ್ನೂ ಧರಿಸದೆ ಭಿಕ್ಷೆ ಪಡೆದು ಜೀವನ ನಡೆಸುತ್ತಿದ್ದಾರೆ.

ಆ ಸಮಯದಲ್ಲಿ ಬಿಳಿ ಬಟ್ಟೆಯನ್ನು ಮಾತ್ರ ಧರಿಸುತ್ತಾರೆ. ಅವರ ಬಳಿ ಕೇವಲ ಎರಡು ಜೋಡಿ ಬಿಳಿ ಬಟ್ಟೆಗಳಿವೆ. ಕೋಟಿಗಟ್ಟಲೆ ದುಡಿದಿದ್ದ ಈ ಕುಟುಂಬ ಎಲ್ಲವನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿರುವುದು ಗುಜರಾತ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.