-->
1000938341
100ಕ್ಕೆ 100ರಷ್ಟು ಮತದಾನ ಮಾಡಿ ಮಾದರಿಯಾದ ಕುಗ್ರಾಮ

100ಕ್ಕೆ 100ರಷ್ಟು ಮತದಾನ ಮಾಡಿ ಮಾದರಿಯಾದ ಕುಗ್ರಾಮ


ನಕ್ಸಲ್ ಆತಂಕ ನಡುವೆ ಬಿಗುಭದ್ರತೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ಜನರು ಭಾಗವಹಿಸಿದ್ದಾರೆ
ಸುಳ್ಯ ಭಾಗದಲ್ಲಿ ಇತ್ತೀಚೆಗೆ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಸಿ.ಎ.ಪಿ.ಎಫ್ ಪೋರ್ಸ್ ನಿಯೋಜಿಸಲಾಗಿತ್ತು. 18 ನಕ್ಸಲ್ ಪೀಡಿತ ಪ್ರದೇಶಗಳನ್ನು ಪೊಲೀಸ್ ಇಲಾಖೆ ಗುರುತಿಸಿತ್ತು. ಅರಣ್ಯ ಪ್ರದೇಶದಲ್ಲಿ ಸಿ.ಎ.ಪಿ.ಎಫ್ ಯೋಧರ ಕಣ್ಣಾವಲಿನಲ್ಲಿ ಬಿರುಸಿನ ಮತದಾನ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಗ್ರಾಮ ಶೇ. 100ರಷ್ಟು ಮತದಾನ ಹಿರಿಮೆಗೆ ಪಾತ್ರವಾಗಿದೆ. ಆ ಮೂಲಕ ಮತದಾನ ಮಾಡದ ನಗರ ಪ್ರದೇಶದವರಿಗೆ ಈ ಕುಗ್ರಾಮದ ಮತದಾರರು ಮಾದರಿಯಾಗಿದ್ದಾರೆ. ಬಾಂಜಾರುಮಲೆ ಗ್ರಾಮದಲ್ಲಿ 111 ಮತದಾರರಿದ್ದು, ನಿನ್ನೆ ಎಲ್ಲರೂ ಮತ ಹಾಕಿ ಎಲ್ಲರಿಗೂ ಆದರ್ಶವಾಗಿದೆ

ರಾಜ್ಯದಲ್ಲಿ 69.23 ಮತದಾನ ನಡೆದಿದೆ.
ಈ ನಡುವೆ ರಾಜ್ಯದಲ್ಲಿ ಒಟ್ಟಾರೆ ಶೇ.69.23ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಪರಿಷ್ಕೃತ ಮಾಹಿತಿ ಬಿಡುಗಡೆ
ಮಾಡಿದೆ.
ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಬೆಂಗಳೂರು ನಗರ ಭಾಗದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಕೇಂದ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ನಡೆದಿದೆ ಎಂಬುದರ ವಿವರ ಇಲ್ಲಿದೆ :
ಉಡುಪಿ-ಚಿಕ್ಕಮಗಳೂರು ಶೇ. 76.06, ಹಾಸನ ಶೇ. 77.51, ದಕ್ಷಿಣ ಕನ್ನಡ ಶೇ. 77.43, ಚಿತ್ರದುರ್ಗ ಶೇ. 73.11, ತುಮಕೂರು ಶೇ. 77.70, ಮಂಡ್ಯ ಶೇ. 81.48, ಮೈಸೂರು ಶೇ. 70.45, ಚಾಮರಾಜನಗರ ಶೇ. 76.59, ಬೆಂಗಳೂರು ಗ್ರಾಮಾಂತರ ಶೇ. 67.29, ಬೆಂಗಳೂರು ಉತ್ತರ ಶೇ. 54.42, ಬೆಂಗಳೂರು ಕೇಂದ್ರ ಶೇ. 52.81, ಬೆಂಗಳೂರು ದಕ್ಷಿಣ ಶೇ. 53.15, ಚಿಕ್ಕಬಳ್ಳಾಪುರ ಶೇ. 76.82, ಕೋಲಾರ ಶೇ. 78.07ರಷ್ಟು ಮತದಾನ ನಡೆದಿದೆ

Ads on article

Advertise in articles 1

advertising articles 2

Advertise under the article