-->

ಪ್ಯಾಂಟ್ ಹಿಂದಿನ ಜೇಬಿನಲ್ಲಿ ಪರ್ಸ್ ಇಡುವ ಅಭ್ಯಾಸವಿದ್ದರೆ ಇಂದೆ ಬಿಟ್ಟುಬಿಡಿ!  ಇದು ವಾಸ್ತು ಪ್ರಕಾರ ಒಳ್ಳೆಯದಲ್ಲ.

ಪ್ಯಾಂಟ್ ಹಿಂದಿನ ಜೇಬಿನಲ್ಲಿ ಪರ್ಸ್ ಇಡುವ ಅಭ್ಯಾಸವಿದ್ದರೆ ಇಂದೆ ಬಿಟ್ಟುಬಿಡಿ! ಇದು ವಾಸ್ತು ಪ್ರಕಾರ ಒಳ್ಳೆಯದಲ್ಲ.ಭಾರತೀಯ  ಸಂಪ್ರದಾಯದಲ್ಲಿ  ವಾಸ್ತುವಿಗೆ ಅದರದೇ ಆದ ಸ್ಥಾನವಿದೆ. ಅದರ ಪ್ರಕಾರ ನಿಮ್ಮ ಪರ್ಸ್‌ನಲ್ಲಿ  ವಸ್ತುಗಳನ್ನು ಇಡಲು  ಯೋಚಿಸಬೇಕು. ಕೆಲವೊಂದು ವಸ್ತುವನ್ನು ಪ್ಯಾಂಟ್  ನಲ್ಲಿ ಇಡುವುದರಿಂದ ಹಣಕಾಸಿನ ಕೊರತೆ ಉಂಟಾಗಬಹುದು. ಇದಲ್ಲದೇ ಪ್ಯಾಂಟಿನ ಹಿಂದಿನ ಪಾಕೆಟ್‌ನಲಿ ಪರ್ಸ್ ಇಡುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡುವುದು ಸೂಕ್ತ .


ಹಲವರು ಪಾಕೆಟ್ ನಲ್ಲಿ ಪರ್ಸ್ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ.  ಈ ನಿಮ್ಮ ಅಭ್ಯಾಸ ಆರ್ಥಿಕವಾಗಿ ನಷ್ಟಕ್ಕೆ ಕಾರಣ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. 

ಪ್ಯಾಂಟಿನ ಹಿಂದಿನ ಪಾಕೆಟ್‌ನಲಿ ಪರ್ಸ್ ಇಟ್ಟು ಅದರಲ್ಲಿ ದುಡ್ಡು ಸೇರಿದಂತೆ ನಿಮ್ಮ ಕುಟುಂಬದ ಫೋಟೋ, ದೇವರ ಫೋಟೋಗಳನ್ನು ಇಡುವುದು ಅಶುಭ ಎಂದು ಹೇಳಲಾಗುತ್ತದೆ . ಈ ರೀತಿಯ ಅಭ್ಯಾಸದಿಂದ ಲಕ್ಷ್ಮಿದೇವಿ ಅಸಮಾಧಾನಗೊಳ್ಳುತ್ತಾಳೆ ಹಾಗೂ ನೀವು ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.


ವಾಸ್ತು ಶಾಸ್ತ್ರದ ಪ್ರಕಾರ ಪರ್ಸ್ ಅನ್ನು ಎಲ್ಲಿ ಇಡಬೇಕು?

 ವಾಸ್ತು ಶಾಸ್ತ್ರದ ಪ್ರಕಾರ, ಪ್ಯಾಂಟಿನ ಹಿಂದಿನ ಪಾಕೆಟ್‌ನಲ್ಲಿ ಪರ್ಸ್ ಇಡುವ ಬದಲು ಮುಂಭಾಗದ ಜೇಬಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


ನಿಮ್ಮ ಪರ್ಸ್ ನಲ್ಲಿ ಈ ವಸ್ತುಗಳನ್ನೂ ಇಡಬೇಡಿ 

 ಕೀಗಳು:

ನಿಮ್ಮ ಮನೆಯ ಕೀ ಸೇರಿದಂತೆ ವಾಹನ,ಬೀರು ಕೀಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ. ಕೀಲಿ ಕೈಗಳ ಗೊಂಚುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಯವುದರಿಂದ ಮಾತೆ ಲಕ್ಷ್ಮಿ ಅಸಮಧಾನಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಜೊತೆಗೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು.


ಮಾತ್ರೆಗಳು:

ತಲೆನೋವು, ಜ್ವರ, ನೆಗಡಿಗೆ ಸಂಬಂಧಿಸಿದ ಮಾತ್ರೆಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ. ಇದು ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನೇರವಾಗಿ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿ ಪ್ರತೀ ಬಾರಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.


ಹಳೆ ಹರಿದ ನೋಟುಗಳು:

ಹಳೆ ಹರಿದ ನೋಟುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ. ಇದು ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದು ನಿಮ್ಮ ಆದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಾಯಿ ಲಕ್ಷ್ಮಿಗೆ ಅಸಮಾಧಾನವಾಗಬಹುದು. ಹಣವಿದ್ದರೂ ಖರ್ಚು ಜಾಸ್ತಿ.


ದೇವರ ಫೋಟೋ:

ದೇವರು ಅಥವಾ ಪೂರ್ವಜರ ಫೋಟೋಗಳನ್ನು ಪರ್ಸ್‌ನಲ್ಲಿ ಇಡಬೇಡಿ. ಇದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತದೆ . ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.

Ads on article

Advertise in articles 1

advertising articles 2

Advertise under the article