-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತುಡರ್" ತುಳು ಸಿನಿಮಾದ ಹಾಡು ಬಿಡುಗಡೆ ಸಮಾರಂಭ

ತುಡರ್" ತುಳು ಸಿನಿಮಾದ ಹಾಡು ಬಿಡುಗಡೆ ಸಮಾರಂಭ

ಮಂಗಳೂರು: ಕತ್ತಲೆ ಆವರಿಸಿದ ತುಳು ಸಿನಿಮಾರಂಗಕ್ಕೆ ಬೆಳಕು ನೀಡುವ ಸಿನಿಮಾ ಬರಬೇಕಾಗಿದೆ. ಏಕಾತನೆಯಿಂದ ಕೂಡಿದ ಸಿನಿಮಾದಿಂದ ಬೇಸೆತ್ತ ಪ್ರೇಕ್ಷಕರು ಹೊಸ ಬಗೆಯ ಸಿನಿಮಾಗಳ ಕುರಿತು ನಿರೀಕ್ಷೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ  ಸುಮುಖ ಪ್ರೊಡಕ್ಷನ್ ನಿರ್ಮಿಸಿರುವ "ತುಡರ್" ತುಳು ಸಿನಿಮಾದ ಹಾಡು ಭಾರತ್ ಮಾಲ್ ನ‌ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ದೀಪ ಬೆಳಗಿಸಿ ಮಾತನಾಡಿದರು. 

ಸಿನಿಮಾ ಒಂದೇ ಆಯಾಮದಲ್ಲಿ ಸಾಗ ಬಾರದು. ಬದಲಾವಣೆ ಅಗತ್ಯ.‌ ತುಡರ್ ಸಿನಿಮಾದಲ್ಲಿ ಹೊಸ ಹೊಸ ಕಲಾವಿದರಿದ್ದಾರೆ. ಬಾಲಿವುಡ್ ನ ಹೆಸರಾಂತ ತಂತ್ರಜ್ಞರಿದ್ದಾರೆ. ಸಿನಿಮಾದಲ್ಲಿ ಒಳ್ಳೆಯ ಕತೆ, ನಿರೂಪಣೆ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಎಂದು ವಿಜಯಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು. 
ಹಾಸ್ಯ ಚಿತ್ರಗಳ ಜೊತೆಗೆ ಸದಭಿರುಚಿಯ ಕಥಾವಸ್ತುವನ್ನು ಒಳಗೊಂಡ ಸಿನಿಮಾಗಳು ಬರಬೇಕು. ತುಡರ್ ಸಿನಿಮಾ ಹೊಸಬರ ಪ್ರಯತ್ನಕ್ಕೆ ಎಲ್ಲರ ಬೆಂಬಲ ಪ್ರೋತ್ಸಾಹ ಬೇಕಾಗಿದೆ ಎಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು. 
ಸಮಾರಂಭದಲ್ಲಿ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಕಾರ್ಪೋರೇಟರ್ ಕಿರಣ್ ಕುಮಾರ್, ಪ್ರೇಮ್ ಶೆಟ್ಟಿ ಸುರತ್ಕಲ್, ಭಾಸ್ಕರ ರೈ ಕುಕ್ಕುವಳ್ಳಿ, ಉಳಿದೊಟ್ಟು ರವೀಂದ್ರ ಶೆಟ್ಟಿ, ನಟ ಸಿದ್ದಾರ್ಥ್ ಎಚ್ ಶೆಟ್ಟಿ, ಹರೀಶ್ ಶೆಟ್ಟಿ, ಆರತಿ ಶೆಟ್ಟಿ, ನಿರ್ದೇಶಕರಾದ ಎಲ್ವನ್ ಮಸ್ಕರೇನಸ್, ದಿನೇಶ್ ಶೆಟ್ಟಿ ,ನಟರಾದ ವಿನೀತ್ , ಸಮತಾ ಅಮೀನ್, ಸಾಹಿಲ್ ರೈ ನಿರ್ಮಾಪಕ ವಿಲ್ಸನ್ ರೆಬೆಲ್ಲೊ, ಮೋಹನ್ ರಾಜ್ ಮೊದಲಾದವರು ಉಪಸ್ಥಿತರಿದ್ದರು. 

ತುಡರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 36 ದಿನಗಳ ಕಾಲ ಚಿತ್ರೀಕರಣ ನಡೆದಿದೆ. 
ತಾರಾಗಣದಲ್ಲಿ ಸಿದ್ಧಾರ್ಥ್ ಎಚ್ ಶೆಟ್ಟಿ, ದೀಕ್ಷಾ ಭಿಷೇ, ಅರವಿಂದ ಬೋಳಾರ್ , ರೂಪ ವರ್ಕಾಡಿ
ಸದಾಶಿವ ಅಮೀನ್ ನಮಿತಾ ಕೂಳೂರು, ಎಲ್ಟನ್ ಮಶ್ಚರೇನ್ಹಸ್
ವಿಕಾಸ್ ಪುತ್ರನ್, ಪ್ರಜ್ವಲ್ ಶೆಟ್ಟಿ
ಹರ್ಷಿತಾ ಶೆಟ್ಟಿ, ರಾಧೇಶ್ ಶೆಣೈ
 ಅನ್ವಿತಾ ಸಾಗರ್, ಜಯಶೀಲ
 ಉಮೇಶ್ ಮಿಜಾರ್ , ಅಶೋಕ್ ಕುಮಾರ್ , ಉದಯ ಪೂಜಾರಿ, ಮೋಹನ್ ರಾಜ್ ಮೊದಲಾದವರು ಅಭಿನಯಿಸಿದ್ದಾರೆ. 
ಸುಮುಖ ಪ್ರೊಡಕ್ಷನ್ಸ್, ಸ್ನೇಹ ಗ್ರೂಪ್ಸ್ ಹಾಗೂ ಟಿಇ ಫಿಲ್ಮ್ಸ್ ಜೊತೆಗೂಡಿ  ಅರ್ಪಿಸಿರುವ ತುಡರ್ ಚಿತ್ರದ ನಿರ್ಮಾಪಕರು : ವಿಲ್ಸನ್ ರೆಬೆಲ್ಲೊ ಸಹ ನಿರ್ಮಾಪಕರು : ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಕರ್ಕೇರಾ, ನಿರ್ದೇಶಕರು : ತೇಜೇಶ್ ಪೂಜಾರಿ, ಎಲ್ಟನ್ ಮಸ್ಕರೇನಸ್.  ಕಥೆ , ಚಿತ್ರ ಕಥೆ , ಸಂಭಾಷಣೆ ಸಾಹಿತ್ಯ: ಮೋಹನ್ ರಾಜ್ , ಸಂಗೀತ : ಪ್ಯಾಟ್ಟ್ಸನ್ ಪಿರೇರಾ , ಸತೀಶ್ ಭಾರದ್ವಾಜ್ 
ಛಾಯಾಗ್ರಹಣ: ಚಂತೂ ಮೆಪ್ಪಯುರು ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ, ನೃತ್ಯ ಸಂಯೋಜಕ ವಿಜೇತ್  ಆರ್ ನಾಯಕ್, ಸಂಕಲನ : ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸ ದೇವಿ.
"ತುಡರ್" ಸಿನಿಮಾ ಜೂನ್ ತಿಂಗಳಲ್ಲಿ ಕರಾವಳಿಯಾದ್ಯಂತ ತೆರೆ ಕಾಣಲಿದೆ.

Ads on article

Advertise in articles 1

advertising articles 2

Advertise under the article

ಸುರ