ಪ್ರವಾಸ ಹೋಗುವವರಿಗೆ ಇಲ್ಲಿದೆ ಸಲಹೆ

ಎಷ್ಟೋ ಜನರಿಗೆ ಪ್ರಯಾಣ ಮಾಡುವ ಆಸೆ ಇರುತ್ತದೆ ಆದರೆ ವಾಕರಿಕೆ, ವಾಂತಿಯಾಗುವಿಕೆ, ಆಯಾಸದ ಕಾರಣ ಎಲ್ಲಿಯೂ ಹೋಗುವುದಿಲ್ಲ ಹೋಗುವ ಆಸೆಯಿದ್ದ ಇನ್ನೂ ಕೆಲವರು ವಾಂತಿಯನ್ನು ತಡೆಯಲು ಮಾತ್ರೆ ತೆಗೆದುಕೊಂಡರು ಯಾವುದೇ ಪ್ರಯೋಜನ ಇರುವುದಿಲ್ಲ 
ಪ್ರವಾಸ ಹೋಗುವ  ಪ್ರವಾಸಿಗರಿಗೆ ಸಲಹೆಗಳು ಇಲ್ಲಿವೆ.


* ಮೊದಲನೆಯದಾಗಿ ತಾಜಾ ಗಾಳಿ ಬರುವ ಸೀಟು ಆಯ್ಕೆ ಮಾಡಿಕೊಳ್ಳಿ. 
* ವಾಂತಿಯಾಗುವ ಬಗ್ಗೆ ಭಯ ಇರುವವರು ತಮ್ಮ ಪ್ರಯಾಣದ ವೇಳೆ ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
* ತಾಜಾ ಗಾಳಿ ಪಡೆಯುವುದರಿಂದ ವಾಂತಿಯಾಗುವಿಕೆಯನ್ನು ತಡೆಯಬಹುದು 

* ಪ್ರಯಾಣಿಸುವಾಗ ನಿಂಬೆ ಅಥವಾ ಕಿತ್ತಳೆ ಹಣ್ಣು ತಗೊಂಡು ಹೋಗುವುದು 
 * ಆಗಾಗ ನಿಂಬೆ ಹಣ್ಣಿನ ಪರಿಮಳ ತೆಗೆದುಕೊಳ್ಳುವುದರಿಂದ ವಾಂತಿಯಾಗುವುದು ತಡೆಯಬಹುದು.
* ಕಿತ್ತಳೆ ಹಣ್ಣು  ಜ್ಯೂಸ್ ಅನ್ನು  ಸೇವಿಸುವುದರಿಂದ ವಾಕರಿಗೆ ಸಮಸ್ಯೆಯನ್ನು ಕಡಿಮೆ ಮಾಡಬಹುದು   .
* ಏಲಕ್ಕಿಯಿಂದ ವಾಂತಿ, ವಾಕರಿಕೆ ಸಮಸ್ಯೆ ದೂರ ಮಾಡಬಹುದು.

* ಸಿಟ್ರಸ್ ಅಂಶವಿರುವ ನಿಂಬೆ ವಾಂತಿ ತೊಲಗಿಸಲು ಸಹಾಯ ಮಾಡುತ್ತದೆ. 
* ನಿಂಬೆಗೆ ಉಪ್ಪು ಹಾಕಿ ಒಣಗಿಸಿಯೂ ಉಪಯೋಗಿಸಬಹುದು. 
* ಪ್ರಯಾಣದ ವೇಳೆ ಒಂದು ತುಂಡು ನಿಂಬೆ ಬಾಯಿಗೆ ಹಾಕಿಕೊಂಡು ಜಗಿದರೆ ವಾಂತಿ ಕಡಿಮೆಯಾಗುತ್ತದೆ.
* ವಾಂತಿ ಬರುವ ಮುನ್ನ ಚಿಕ್ಕ ತುಂಡು ಶುಂಠಿಯನ್ನು ಬಾಯಿಗೆ ಹಾಕಿಕೊಳ್ಳಬೇಕು.

* ಪುದಿನಾ ಎಲೆಗಳ ಪರಿಮಳ ತೆಗೆದುಕೊಳ್ಳುವುದರಿಂದ ವಾಕರಿಕೆಯನ್ನು ತಡೆಯಬಹುದು 
* ಒಂದು ಕಪ್ ನೀರಿನಲ್ಲಿ 2 ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಬಳಿಕ ಅದಕ್ಕೆ ನಿಂಬೆ ರಸ ಮತ್ತು ಉಪ್ಪು ಹಾಕಿ ಕುಡಿಯುವುದರಿಂದ ವಾಂತಿ ಕಡಿಮೆಯಾಗುತ್ತದೆ.
* ಒಂದೆರಡು ಪುದೀನಾ ಎಲೆಗಳನ್ನು ಸ್ವಲ್ಪ ಉಪ್ಪು ಸೇರಿಸಿ ಜಗಿದು ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಒಣಗಿದ ಪುದೀನಾ ಎಲೆಗಳು 
* ದಾಲ್ವಿನ್ನಿ, ಜೀರಿಗೆ ಫೆನ್ನೆಲ್ ಪುಡಿ ವಾಕರಿಕೆ ಮತ್ತು ವಾಂತಿಗೆ ಉತ್ತಮ ಪರಿಹಾರ. ಈ ಸಾಮಾಗ್ರಿಗಳನ್ನು ಬಳಸಿ ಚಹಾ ಮಾಡಿ ಕುಡಿಯುವುದು ಉತ್ತಮ ಪ್ರಯೋಜನವಾಗುತ್ತದೆ.

* ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಅರ್ಧ ಟೀ ಚಮಚ ಸೋಂಪು ಕಾಳುಗಳನ್ನು ಹಾಕಿ ಕುದಿಯಲು ಬಿಡಿ. ಈ ಕಷಾಯವನ್ನು ದಿನಕ್ಕೆ 3 ಬಾರಿ ಕುಡಿದರೆ ವಾಂತಿ ಮತ್ತು ವಾಕರಿಕೆ ಸಮಸ್ಯೆ ಕಡಿಮೆಯಾಗಲು ಸಹಾಯ ಮಾಡುತ್ತದೆ.
ಗಮನ ಬೇರೆಡೆ ಸೆಳೆಯುವುದು  ಉತ್ತಮ
* ವಾಂತಿಯಾಗುವಿಕೆಯ ಗಮನ ಬೇರೆಡೆ ಸೆಳೆಯಲು ಸಂಗೀತ ಕೇಳುವುದು, ಚಲನಚಿತ್ರ ವೀಕ್ಷಿಸುವುದು ಒಳ್ಳೆಯದು 
ಗೇಮ್ಸ್ ಆಡುವುದು, ಪುಸ್ತಕಗಳನ್ನು ಓದುವುದು ಅಥವಾ ಸಹ ಪ್ರಯಾಣಿಕರ ಜತೆ ಮಾತನಾಡುವುದು.. 
ಹೀಗೆ ಬೇರೆ ಬೇರೆ ಚಟುವಟಿಕೆಗಳಿಂದ ಗಮನ ಬೇರೆಡೆ ಇದ್ದರೆ ವಾಂತಿಯಾಗುವ ಅನುಭವದಿಂದ ದೂರವಿರಬಹುದು .