-->
1000938341
ಬೇಸಿಗೆ ಸಮಯದಲ್ಲಿ  ಚರ್ಮದ  ಆರೈಕೆ ಹೇಗೆ?  ಇಲ್ಲಿದೆ ಮಾಹಿತಿ

ಬೇಸಿಗೆ ಸಮಯದಲ್ಲಿ ಚರ್ಮದ ಆರೈಕೆ ಹೇಗೆ? ಇಲ್ಲಿದೆ ಮಾಹಿತಿ




 

ಚರ್ಮದ ಮೇಲಿನ ಆರೈಕೆ ಪ್ರತಿಯೊಬ್ಬರ ಅವಶ್ಯಕ. ಆದರೆ ಕೆಲವರು ಇದರ ಬಗ್ಗೆ ಗಂಭೀರವಾಗಿ ಯೋಚಿಸುವುದು ಇಲ್ಲ. ಅದರಲ್ಲೂ ಪುರುಷರು ತಮ್ಮ ತ್ವಚೆಯ ಆರೈಕೆಯಲ್ಲಿ ಯಾವಾಗಲೂ ಹಿಂದೂ . ಆದರೆ ಮಹಿಳೆಯರು ತ್ವಚೆಯ ಆರೈಕೆ ಮಾಡಿದರು ಸಹ ಮತ್ತು ಇದರ ಕಡೆ ಗಮನ ಹರಿಸುವರು ಕೂಡ. ಆದರೂ ಚರ್ಮದ ನಾನಾ ರೀತಿಯ ಸಮಸ್ಯೆಗಳು ಅವರನ್ನು ಕಾಡುತ್ತಲೇ ಇರುತ್ತದೆ.




ಮುಖ್ಯವಾಗಿ ಚರ್ಮದಲ್ಲಿ ಮೊಡವೆ, ಬೊಕ್ಕೆ ಇತ್ಯಾದಿಗಳು ಕಂಡುಬರುವುದು ಸಾಮಾನ್ಯ. ಇದಕ್ಕಾಗಿ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಉತ್ಪನ್ನಗಳನ್ನು ತಂದು ಬಳಸುತ್ತರೆ  ಆದರೆ ಅದು ಒಳ್ಳೆಯದಲ್ಲ.


ಇಂತಹ ಸಮಯದಲ್ಲಿ ಪೋಷಕಾಂಶಗಳು ಇರುವ ಆಹಾರ ಸೇವಿಸುವ ಜತೆಗೆ ನೀವು ಮನೆಯಲ್ಲೇ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬೇಕು. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ ಮತ್ತು ಇದು ಚರ್ಮದ ವಿವಿಧ ರೀತಿಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.ಇಂತಹ ಕೆಲವು ಸಾಮಗ್ರಿಗಳ ಬಗ್ಗೆ ವಿವರ ಇಲ್ಲಿದೆ .


ಅಲೋವೆರಾ : 

ಅಲೋವೆರಾ ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವುದು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಚರ್ಮದ ಸಮಸ್ಯೆ ವಿರುದ್ಧ ಹೋರಾಡುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು. ತಾಜಾ ಅಲೋವೆರಾ ಎಲೆಯನ್ನು ಕತ್ತರಿಸಿ, ಅದರಿಂದ ಲೋಳೆ ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಇದನ್ನು ನೀವು ಫೇಸ್ ಪ್ಯಾಕ್ ಗೆ ಮಿಶ್ರಣ ಮಾಡಿ ಬಳಸಬಹುದು.


ಅರಿಶಿನ

ನಾವು ಪ್ರತಿನಿತ್ಯವೂ ಅಡುಗೆಗೆ ಬಳಸುವಂತಹ ಅರಶಿನದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ಚರ್ಮಕ್ಕೆ ಆರೋಗ್ಯ ನೀಡುವ ಗುಣಗಳು ಕೂಡ ಇವೆ. ಅರಶಿನದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಮತ್ತು ಇದು ತ್ವಚೆಗೆ ಅದ್ಭುತವಾಗಿ ಕೆಲಸ ಮಾಡುವುದು. ಅರಶಿನವನ್ನು ಅಲೋವೆರಾ ಲೋಳೆ, ಹಾಲು ಮತ್ತು ಕಡಲೆಹಿಟ್ಟಿನ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಕೆಲವು ನಿಮಿಷ ಹಾಗೆ ಇರಿ ಮತ್ತು ಇದರ ಬಳಿಕ ತೊಳೆಯಿರಿ. ಒಂದು ಚಿಟಿಕೆ ಅರಶಿನವನ್ನು ಅಲೋವೆರಾ ಲೋಳೆ ಜತೆಗೆ ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು.


ಬೇವು : 

ಬೇವಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದು ಚರ್ಮಕ್ಕೆ ಕೂಡ ತುಂಬಾ ಅದ್ಭುತವಾಗಿ ಕೆಲಸ ಮಾಡುತ್ತದೆ. ಬೇವಿನ ಎಲೆಗಳ ಪೇಸ್ಟ್ ಮಾಡಿಕೊಂಡು, ಅದಕ್ಕೆ ರೋಸ್ ವಾಟರ್ ಹಾಕಿ, ಮುಖಕ್ಕೆ ಹಚ್ಚಿಕೊಳ್ಳಬಹುದು. ಬೇವಿ ಹುಡಿಯನ್ನು ಚರ್ಮಕ್ಕೆ ಹಚ್ಚಬಹುದು. ಸ್ವಲ್ಪ ಬೇವಿನ ಹುಡಿ ಮತ್ತು ಎರಡು ಚಿಟಿಕೆ ಅರಶಿನ ಹಾಕಿ ಮಿಶ್ರಣ ಮಾಡಿ. ಇದಕ್ಕೆ ರೋಸ್ ವಾಟರ್ ಹಾಕಿಕೊಂಡು ಪೇಸ್ಟ್ ಮಾಡಿ. ಇದನ್ನು ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿ.


ಶ್ರೀಗಂಧ : 

ತ್ವಚೆಯ ಆರೈಕೆಯಲ್ಲಿ ಅಗ್ರ ಸ್ಥಾನವನ್ನು ಶ್ರೀಗಂಧಕ್ಕೂ ನೀಡಬಹುದು. ಇದು ತ್ವಚೆಗೆ ಬಳಸಬಹುದಾದ ಅದ್ಭುತ ಸಾಮಗ್ರಿ. ಶ್ರೀಗಂಧದ ಎಣ್ಣೆ ಅಥವಾ ಶ್ರೀಗಂಧದ ಹುಡಿಯನ್ನು ಚರ್ಮಕ್ಕೆ ಬಳಸಬಹುದು. ಕ್ಲಿನ್ಸಿಂಗ್ ಮಾಡಿದ ಬಳಿಕ ಶ್ರೀಗಂಧದ ಎಣ್ಣೆಯನ್ನು ತ್ವಚೆಗೆ ಹಚ್ಚಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿರುತ್ತದೆ. ಶ್ರೀಗಂಧದ ಹುಡಿಯನ್ನು ಸ್ವಲ್ಪ ಕಡಲೆಹಿಟ್ಟು, ಚಿಟಿಕೆ ಅರಶಿನ, ಅಲೋವೆರಾ ಮತ್ತು ರೋಸ್ ವಾಟ‌ರ್ ಜತೆಗೆ ಹಚ್ಚಿಕೊಳ್ಳಿ. ಇದನ್ನು ವಾರದಲ್ಲಿ ಎರಡು ಸಲ ಬಳಸಿಕೊಳ್ಳಿ.


ಚರ್ಮದ ಕಿರಿಕಿರಿಗೆ ಸೌತೆಕಾಯಿ ಐಸ್ ಕ್ಯೂಬ್

ಸೌತೆಕಾಯಿ ಮತ್ತು ನಿಂಬೆ ಹಣ್ಣು ಎರಡೂ ಕೂಡ ದೇಹಕ್ಕೆ ಬಹಳ ತಂಪು ನೀಡುವ, ದೇಹದ ಬಿಸಿಯನ್ನು ಶಮನ ಮಾಡುವ ಮತ್ತು ಮನಸ್ಸನ್ನು ಪುನಶ್ಚತನಗೊಳಿಸುವ ಗುಣ ಲಕ್ಷಣಗಳನ್ನು ಹೊಂದಿವೆ. ಅದರಂತೆ ನಮ್ಮ ದೇಹದ ಚರ್ಮ ಉರಿಯೂತಕ್ಕೆ ಒಳಗಾಗಿ ಫ್ರೀ ರಾಡಿಕಲ್ ಗಳಿಂದ ಹಾನಿಯಾಗುವುದನ್ನು ತಪ್ಪಿಸುತ್ತದೆ.


ಸೌತೆಕಾಯಿ ಐಸ್ ಕ್ಯೂಬ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು


*ಸೌತೆಕಾಯಿಯ ಪೀಸ್ ಗಳು ಮತ್ತು ನಿಂಬೆ ಹಣ್ಣಿನ ಜ್ಯೂಸ್

ತಯಾರು ಮಾಡುವ ವಿಧಾನ

*ಮೊದಲಿಗೆ ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ತಾಜಾ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ

*ಈ ಮಿಶ್ರಣವನ್ನು ಐಸ್ ಟ್ರೇಗೆ ಹಾಕಿ ಮೇಲೆ ಸೌತೆಕಾಯಿ ತುಂಡುಗಳನ್ನು ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ.

*ನಾಲ್ಕರಿಂದ ಐದು ಗಂಟೆಗಳ ಕಾಲ ಫ್ರೀಜ್ ಮಾಡಿ.

*ಪ್ರತಿ ದಿನ ಮನೆಗೆ ಬಂದ ತಕ್ಷಣ ಸೌತೆಕಾಯಿ ಐಸ್ ಕ್ಯೂಬ್ ನಿಂದ ಚರ್ಮವನ್ನು ಉಜ್ಜಿಕೊಂಡು ಚರ್ಮದ ತಾಜಾತನವನ್ನು ಮತ್ತು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ

Ads on article

Advertise in articles 1

advertising articles 2

Advertise under the article